ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಎಐಸಿಸಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಯಾವ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂದು ಸಂಪೂರ್ಣ ವಿವರ ಇಲ್ಲಿದೆ
ಗೋಕಾಕ್- ಮಹಾಂತೇಶ್ ಕಡದಿ
ಕಿತ್ತೂರು – ಬಾಬಾಸಾಹೇಬ ಪಾಟೀಲ್
ಸವದತ್ತಿ ಯಲ್ಲಮ್ಮ- ವಿಶ್ವಾಸ ವಸಂತ ವೈದ್ಯ
ಮುಧೋಳ್- ರಾಮಪ್ಪ ಬಾಲಪ್ಪ ತಿಮ್ಮಾಪುರ
ನಿಪ್ಪಾಣಿ – ಕಾಕಾಸಾಹೇಬ ಪಾಟೀಲ
ಬೀಳಗಿ- ಜೆಟಿ ಪಾಟೀಲ್
ಬಾದಾಮಿ- ಭೀಮಸೇನ ಬಿ. ಚಿಮ್ಮನಕಟ್ಟಿ
ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
ಬಿಜಾಪುರ ನಗರ- ಅಬ್ದುಲ್ ಹಮೀದ್ ಕಜಸಾಹೇಭ್ ಮುಶ್ರೀಫ್
ನಾಗಠಾಣ -ವಿಠ್ಠಲ್ ಕಟಕಧೋಂಡ
ಅಫ್ಜಲ್ ಪುರ- ಎಂ ವೈ ಪಾಟೀಲ್
ಯಾದಗಿರಿ- ಚೆನ್ನಾರೆಡ್ಡಿ ಪಾಟೀಲ್
ಗುರುಮಿಠಕಲ್- ಬಾಬೂರಾವ್ ಚಿಂಚನಸೂರು
ಗುಲ್ಬರ್ಗಾ ದಕ್ಷಿಣ – ಅಲ್ಲಮಪ್ರಭು ಪಾಟೀಲ್
ಬಸವಕಲ್ಯಾಣ -ವಿಜಯ ಧರಮ ಸಿಂಗ್
ಗಂಗಾವತಿ- ಇಕ್ಬಾಲ್ ಅನ್ಸಾರಿ
ನರಗುಂದ- ಬಿ. ಆರ್ ಯಾವಗಲ್
ಧಾರವಾಡ- ವಿನಯ್ ಕುಲಕರ್ಣಿ
ಕಲಘಟಗಿ: ಸಂತೋಷ್ ಎಸ್ ಲಾಡ್
ಸಿರಸಿ- ಭೀಮಣ್ಣ ನಾಯ್ಕ
ಯಲ್ಲಾಪುರ- ವಿಎಸ್ ಪಾಟೀಲ್
ಕೂಡ್ಲಿಗಿ- ಎಸ್ ಟಿ- ಡಾ. ಶ್ರೀನಿವಾಸ ಎನ್ ಟಿ
ಮೊಳಕಾಲ್ಮೂರು- ಎಸ್ ಟಿ- ಎನ್ ವೈ ಗೋಪಾಲಕೃಷ್ಣ
ಚಿತ್ರದುರ್ಗ- ಕೆಸಿ ವೀರೇಂದ್ರ ಪಪ್ಪಿ
ಹೊಳಲ್ಕೆರೆ-ಆಂಜನೇಯ ಎಚ್
ಚೆನ್ನಗರಿ- ಬಸವರಾಜು ವಿ ಶಿವಗಂಗಾ
ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
ಉಡುಪಿ- ಪ್ರಸಾದ್ ರಾಜ್ ಕಾಂಚನ್
ಕಡೂರು- ಆನಂದ ಕೆ ಎಸ್
ತುಮಕೂರು ನಗರ- ಇಕ್ಬಾಲ್ ಅಹಮದ್
ಗುಬ್ಬಿ- ಎಸ್ ಆರ್ ಶ್ರೀನಿವಾಸ
ಯಲಹಂಕ- ಕೇಶವ ರಾಜಣ್ಣ
ಯಶವಂತ ಪುರ- ಎಸ್ ಬಾಲರಾಜ ಗೌಡ
ಮಹಾಲಕ್ಷ್ಮೀ ಲೇಔಟ್ -ಕೇಶವ ಮೂರ್ತಿ
ಪದ್ಮನಾಭ ನಗರ- ರಘುನಾಥ ನಾಯ್ಡು
ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ : ಪಿ . ರವಿಕುಮಾರ್
ಕೃಷ್ಣರಾಜಪೇಟೆ- ಬಿಎಲ್ ದೇವರಾಜ್
ಬೇಲೂರು : ಬಿ ಶಿವರಾಮ್
ಮಡಿಕೇರಿ : ಡಾ. ಮಂತರ್ ಗೌಡ
ಚಾಮುಂಡೇಶ್ವರಿ-ಸಿದ್ದೇಗೌಡ
ಕೊಳ್ಳೇಗಾಲ-ಎಸ್ ಸಿ- ಎ ಆರ್ ಕೃಷ್ಣ ಮೂರ್ತಿ
ಕಾಂಗ್ರೆಸ್ ತನ್ನ ಪಟ್ಟಿಯನ್ನು ರಿಲೀಸ್ ಮಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ 42 ಕ್ಷೇತ್ರದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ. ರಾಜ್ಯದ ಭವ್ಯ ಭವಿಷ್ಯಕ್ಕಾಗಿ, ಅಭಿವೃದ್ಧಿಗಾಗಿ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ, ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡಿದೆ.