ದಾವಣಗೆರೆ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ತಿಂಗಳು ಕಳೆದಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸಚಿವರು ಶಾಸಕರು ವರ್ಗಾವಣೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಕಾಮಗಾರಿಗಳಲ್ಲಿ ಕಮಿಷನ್ ಕೇಳುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯವನ್ನು ಕತ್ತಲೆಯಲ್ಲಿಡುವುದು ಆರನೇ ಗ್ಯಾರಂಟಿ : ರಾಜ್ಯದಲ್ಲಿ ನಾಲ್ಕು ಥರ್ಮಲ್ ಪವರ್ ಪ್ಲಾಂಟ್ ಇದ್ದು, ಕೇಂದ್ರದ ಪವರ್ ಪ್ರಾಜೆಕ್ಟ್ ಕೂಡ ಇದೆ. 31 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗ್ತಿದೆ. ರಾಜ್ಯಕ್ಕೆ ಬೇಕಾಗುವ ವಿದ್ಯುತ್ 15 ಸಾವಿರ ಮೆಗಾವ್ಯಾಟ್. ಆದರೂ, ಲೋಡ್ ಶೆಡ್ಡಿಂಗ್ ಆಗುತ್ತಿದೆ. ಸರ್ಕಾರ ನಿರ್ಲಕ್ಷ್ಯತನ ತೋರುತ್ತಿದೆ. ರಾಜ್ಯವನ್ನು ಕತ್ತಲೆಯಲ್ಲಿಡುವುದು ಸರ್ಕಾರದ ಆರನೇ ಗ್ಯಾರಂಟಿ. ಇಂಧನ ಸಚಿವರು ಗಾಢ ನಿದ್ದೆಯಲ್ಲಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಬೆಂಬಲಿಗರು ಸನಾತನ ಧರ್ಮದ ಮೇಲೆ ದಾಳಿ ನಡೆಸುತ್ತಿದ್ದಾರೆ. ಮುಖದ ಮೇಲೆ ಮೀಸೆ ಬರದಿದ್ದವನನ್ನು ಸಿಎಂ ಮಗ ಎಂದು ಸಚಿವ ಮಾಡಿದ್ದಾರೆ. ಅವನು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ತಮಿಳುನಾಡು ಸಚಿವ ಉದಯನಿಧಿ ವಿರುದ್ಧ ಕಾರಜೋಳ ವಾಗ್ದಾಳಿ ನಡೆಸಿದರು. ಸೆಕ್ಯೂಲರ್ ಧರ್ಮ ಎಂದರೆ ಹಿಂದೂ ಧರ್ಮ. ಕಾಂಗ್ರೆಸ್ ನಾಯಕರು ಧರ್ಮಗಳ ನಡುವೆ ಹುಳಿ ಹಿಂಡಿ ವೋಟ್ ಬ್ಯಾಂಕ್ ಮಾಡಲು ಯತ್ನಿಸುತ್ತಿದ್ದಾರೆ. ವಿದೇಶಗಳಿಂದ ಬಂದ ಧರ್ಮಗಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಿರುವುದು ಹಿಂದೂ ಧರ್ಮ ಎಂದರು.
ಇದನ್ನೂ ಓದಿ: ಪೊಯಿಲಾ ಬೈಸಾಖ್ ‘ಬಂಗಾಳ ದಿನ’ವಾಗಿ ನಿರ್ಣಯ ಅಂಗೀಕಾರ
ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ , ಸೇರಿದಂತೆ ಹಲವರನ್ನು ಕಾಂಗ್ರೆಸ್ ಹೊರ ಹಾಕಿತ್ತು. ಈಗ ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ ಎನ್ನುತ್ತಿದ್ದಾರೆ. ಲಿಂಗಾಯತರಿಗೆ ಅನ್ಯಾಯ ಮಾಡಿಕೊಂಡು ಬಂದಿರುವುದು ಕಾಂಗ್ರೆಸ್ ನವರು. ಲಿಂಗಾಯತರನ್ನು ಎರಡನೇ ದರ್ಜೆಯಯಾಗಿ ಪರಿಗಣಿಸಿದ್ದಾರೆ. ಶಾಮನೂರು ಶಿವಶಂಕರಪ್ಪ 20 ವರ್ಷಗಳ ಕಾಲ ಖಜಾಂಚಿಯಾಗಿದ್ದಾರೆ. ಅವರಿಗೆ ಯಾವ ಸ್ಥಾನ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.