ಬೆಂಗಳೂರು: ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 6 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.124 ಅಭ್ಯರ್ಥಿಗಳಲ್ಲಿ 6 ಮಹಿಳೆಯರಿಗೆ ಸ್ಥಾನ ಸಿಕ್ಕಿದೆ, 6 ಅಭ್ಯರ್ಥಿಗಳ ಪೈಕಿ 5 ಮಹಿಳಾ ಅಭ್ಯರ್ಥಿಗಳು ಹಾಲಿ ಶಾಸಕಿಯರಾಗಿದ್ದಾರೆ. ಉಳಿದ ಒಬ್ಬರು ಅಭ್ಯರ್ಥಿ ಕುಸುಮಾ ರಾಜರಾಜೇಶ್ವರಿನಗರದಲ್ಲಿ ಕಣಕ್ಕಿಳಿಯಲಿದ್ದಾರೆ.
ಯಾವ ಕ್ಷೇತ್ರದಿಂದ ಯಾರು ಕಣಕ್ಕೆ?ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ, ಡಾ. ಅಂಜಲಿ ನಿಂಬಾಳ್ಕರ್ – ಖಾನಾಪುರ, ಕನೀಝ್ ಫಾತಿಮ – ಕಲಬುರಗಿ ಉತ್ತರ, ರೂಪಕಲಾ ಶಶಿಧರ್ – ಕೆಜಿಎಫ್ , ಸೌಮ್ಯ ರೆಡ್ಡಿ – ಜಯನಗರ, ಕುಸುಮಾ-ರಾಜರಾಜೇಶ್ವರಿನಗರ ಇಷ್ಟು ಜನರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧಿಸಲಿದ್ದಾರೆ. ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಅಷ್ಟೇ ಅಲ್ಲದೇ ಮೊದಲ ಪಟ್ಟಿಯಲ್ಲೇ 12 ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ.