Sunday, March 26, 2023
spot_img
- Advertisement -spot_img

ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಸೋಲಿಗೆ ಹೆದರಿ ಆತ್ಮಹತ್ಯೆಗೆ ಯತ್ನ

ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಸೋಲಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನ ಗಾಂಧಿಧಾಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರತ್ ಬೈ ವೆಲ್ಜಿಬೈ ಸೋಲಂಕಿ ಎಂಬುವವರು 12,261 ಒಂದು ಮತಗಳಿಂದ ಹಿಂದೆ ಉಳಿದ ಹಿನ್ನೆಲೆಯಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆ ಆತ್ಮಹತ್ಯೆ ಯತ್ನಿಸಿದ್ದಾರೆ.

ಬಿಜೆಪಿ ವಿರುದ್ಧ ಮತಪೆಟ್ಟಿಗೆ ತಿರುಚಿದ ಆರೋಪ ಹೊರಿಸಿದ್ದಾರೆ.ಕುತ್ತಿಗೆಗೆ ಕೇಸರಿ ಶಾಲನ್ನು ಗಟ್ಟಿಯಾಗಿ ಸುತ್ತಿ ಉರುಳು ಹಾಕಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಅವರ ಜೊತೆ ಇದ್ದವರು ಅವರನ್ನು ತಡೆದಿದ್ದಾರೆ. ಗಾಂಧಿಧಾಮ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು ಸೋಲಂಕಿ.ಕೆಲವೊಂದು ಮತ ಪೆಟ್ಟಿಗೆಗಳನ್ನು ಸರಿಯಾಗಿ ಸೀಲ್ ಮಾಡಿರಲಿಲ್ಲ ಎಂದು ದೂರಿದ ಅವರು 12,261 ಮತಗಳ ಅಂತರದಿಂದ ಸೋಲುವುದು ಖಚಿತವಾದಂತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಂದಹಾಗೆ ಇತ್ತ ಬಿಜೆಪಿ ಸತತ ಏಳನೇ ಬಾರಿ ಗುಜರಾತ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದೆ.

Related Articles

- Advertisement -

Latest Articles