Sunday, October 1, 2023
spot_img
- Advertisement -spot_img

‘ಕಾಂಗ್ರೆಸ್ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ’

ಚಾಮರಾಜನಗರ : 136 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ನವರಿಗೆ ಇನ್ನೂ ಶಾಸಕರು ಬೇಕಾಗಿದ್ದಾರೆ ಎಂದರೆ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ. ಪೂರ್ಣ ಬಹುಮತ ಇರುವವರು ಬೇರೆ ಶಾಸಕರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಯಾರೂ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಎನ್.ಮಹೇಶ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಇನ್ನು ಆರು ತಿಂಗಳು ಕಾಯಿರಿ. ಆ ಮೇಲೆ ಏನಾಗುತ್ತದೆ ನೋಡಿ, ಆಗ ಕರ್ನಾಟಕ ರಾಜಕಾರಣದ ಚಿತ್ರಣವೇ ಬದಲಾಗಿರುತ್ತದೆ. ಆಪರೇಷನ್ ಹಸ್ತ ಮಾಡಲು ಹೊರಟಿರುವ ಕಾಂಗ್ರೆಸ್‌ನವರಿಗೆ ಅಭದ್ರತೆ ಎಷ್ಟು ಕಾಡುತ್ತಿದೆ ಎಂದು ಅರ್ಥವಾಗುತ್ತದೆ ತಿಳಿಯುತ್ತದೆ ಎಂದರು.

ಇದನ್ನೂ ಓದಿ : ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ : ಶಾಸಕಿಗೆ ಹೈಕೋರ್ಟ್ ನೋಟಿಸ್

ಅಂತೆ-ಕಂತೆ ಏನೂ ಇಲ್ಲ ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ 100 ಸ್ಥಾನಕ್ಕೆ ಕುಸಿಯುವ ಆತಂಕ ನಾಯಕರನ್ನು ಕಾಡುತ್ತಿದೆ, ಅದಕ್ಕಾಗಿ ಈ ಅವತಾರಗಳನ್ನು ಮಾಡುತ್ತಿದ್ದಾರೆ ಎಂದು ಮಹೇಶ್ ಲೇವಡಿ ಮಾಡಿದರು.

ಸಚಿವ ಕೆ.ವೆಂಕಟೇಶ್ ಅವರು ಜಿಲ್ಲೆಯನ್ನು ಕಡೆಗಣಿಸಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಇದ್ದಾಗ ಸಚಿವರು ವಾರಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಅಧಿಕಾರಿಗಳಿಗೆಲ್ಲ ಕೆಲಸ ಅವರವರ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸುತ್ತಿದ್ದರು. ಈಗ ಕಾಂಗ್ರೆಸ್ ನವರ ಆಡಳಿತ ವೈಖರಿ ಏನು ಅಂತ ಜನರಿಗೆ ಗೊತ್ತಾಗಿದೆ, ಮುಂದಿನ 5-6 ತಿಂಗಳಲ್ಲಿ ಎಲ್ಲಾ ಗೊತ್ತಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದರು.

ಜಿಲ್ಲೆಯ ಮೇಲೆ ಆಸಕ್ತಿ ಇದ್ದಿದ್ದರೆ ವಾರಕ್ಕೊಮ್ಮೆ ಬರುತ್ತಿದ್ದರು. ಜಿಲ್ಲೆಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂದರೆ ಸಚಿವರಿಗೆ ಜಿಲ್ಲೆಯ ಮೇಲೆ ಆಸಕ್ತಿನೇ ಇಲ್ಲ ಎಂಬುವುದು ಅರ್ಥವಾಗುತ್ತದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದೆ ಇವರ ಕೆಲಸವಾಗಿದೆ, ಅದಕ್ಕಾಗಿ ಎಲ್ಲ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವರು ಟೀಕಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles