ಹೈದರಾಬಾದ್ : ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಮತ್ತು ಸಮಾವೇಶದ ಪ್ರಯುಕ್ತ ನಗರದಲ್ಲಿ ಹಾಕಿದ್ದ ಸೋನಿಯಾ ಗಾಂಧಿಯವರ ಹೋರ್ಡಿಂಗ್ ಒಂದು ಬಿಜೆಪಿ ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹೈಕಮಾಂಡ್ ನಾಯಕರಿಗೆ ಸ್ವಾಗತ ಕೋರಿ ತೆಲಂಗಾಣ ಕಾಂಗ್ರೆಸ್ ವತಿಯಿಂದ ಹೋರ್ಡಿಂಗ್ ಹಾಕಲಾಗಿತ್ತು. ಈ ಪೈಕಿ ಸೋನಿಯಾ ಗಾಂಧಿಯವರ ಹೋರ್ಡಿಂಗ್ ಅನ್ನು ‘ಭಾರತ ಮಾತೆಯಂತೆ ಬಿಂಬಿಸಲಾಗಿತ್ತು.
ಹೋರ್ಡಿಂಗ್ ವಿರುದ್ಧ ಕಿಡಿ ಕಾರಿರುವ ಕರ್ನಾಟಕ ಬಿಜೆಪಿ, ಜಾಮೀನು ಪಡೆದು ಹೊರಗಿರುವ ಸೋನಿಯಾ ಗಾಂಧಿಯವರನ್ನು ‘ಭಾರತ ಮಾತೆಗೆ’ ಹೋಲಿಸಿ ಕಾಂಗ್ರೆಸ್ ಮತ್ತೊಮ್ಮೆ ಅವಮಾನಿಸಿದೆ. ಹಗರಣಗಳ ಆರೋಪಿ ಕಾಂಗ್ರೆಸ್‌ನ ರಾಜ ಮಾತೆಯಾಗಿರಬಹುದು. ಆದರೆ ಎಂದಿಗೂ ಭಾರತ ಮಾತೆಯಾಗಲು ಸಾಧ್ಯವಿಲ್ಲ. ಭಾರತದ ಕಲ್ಪನೆಗೆ ಸೋನಿಯಾ ಗಾಂಧಿಗಿಂತ ಹೆಚ್ಚಿನ ಹಾನಿಯನ್ನು ಯಾರೂ ಮಾಡಿಲ್ಲ. ಈ ಹೇಯ ಕೃತ್ಯಕ್ಕೆ ಕಾಂಗ್ರೆಸ್ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ : ಸಿಎಂ ಕೆಸಿಆರ್ ವಿರುದ್ಧ 30 ಪರ್ಸೆಂಟ್ ಕಮಿಷನ್ ಆರೋಪ; ಕಾಂಗ್ರೆಸ್‌ನಿಂದ ‘ಬುಕ್ ಮೈ ಸಿಎಂ’ ಪೋಸ್ಟರ್!
ತೆಲಂಗಾಣ ವಿಧಾನಸಭಾ ಚುನಾವಣೆ ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪುನರ್ ರಚಿಸಲ್ಪಟ್ಟ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆಯನ್ನು ಶನಿವಾರ ಹೈದರಾಬಾದ್ ನಲ್ಲಿ ನಡೆಸಿದೆ. ಭಾನುವಾರ ಹೈದರಾಬಾದ್ ನ ಹೊರವಲಯದಲ್ಲಿ ‘ವಿಜಯಭೇರಿ’ ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಕರ್ನಾಟಕದಂತೆ 6 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.