ಚಿಕ್ಕಮಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಧ್ಯಮದಲ್ಲಿ ಬರುವ ಎಲ್ಲಾ ಸುದ್ದಿ ಅಧಿಕೃತ ಅಂತ ಈಗಲೇ ಮುದ್ರೆ ಒತ್ತಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ವರಿಷ್ಠರು ಅಳೆದು-ತೂಗಿ ನಿರ್ಣಯ ತೆಗೆದುಕೊಂಡಿರುತ್ತಾರೆ ಅನ್ನೋದು ನಮ್ಮ ನಂಬಿಕೆ, ವರಿಷ್ಠರು ಅಧಿಕೃತವಾಗಿ ಪ್ರಕಟಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ದೇಶಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಅಪೇಕ್ಷೆ, ಈಗ ಇರೋ ಕಾಂಗ್ರೆಸ್ ತನ್ನ ಮೈತ್ರಿಕೂಟದ ಒಡಲಲ್ಲಿ ಸನಾತನ ಧರ್ಮದ ವಿಷ ಬೀಜಗಳನ್ನ ತುಂಬಿಕೊಂಡಿದೆ, ಅದಕ್ಕೆ ಸ್ಟಾಲಿನ್, ರಾಜ ಕೊಟ್ಟಿರೋ ಹೇಳಿಕೆಯನ್ನ ಹಲವು ಕಾಂಗ್ರೆಸ್ಸಿಗರು ಸಮರ್ಥಿಸಿಕೊಂಡಿದ್ದಾರೆ, ಈಗ ಡ್ಯಾಮೇಜ್ ಆಗ್ತಿದೆ ಅಂತ ಗೊತ್ತಾಗಿ ದೂರ ಇರುವ ಪ್ರಯತ್ನ ಮಾಡ್ತಿದ್ದಾರೆ ಎಂದರು .
ಅವರಿಗಿರೋದು ಸನಾತನ ಧರ್ಮದ ದ್ವೇಷ, ಭಾರತದ ಬಗ್ಗೆ ಅಸಹನೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತ ಹೆಸರಿಟ್ಟುಕೊಂಡ ಕಾಂಗ್ರೆಸ್ ಭಾರತದ ಮೇಲೆ ಅಸಹನೆ ಹೊಂದಿದೆ, ಕಾಂಗ್ರೆಸ್ಸಿಗರು ಲಾಲ್…ಬಾಲ್…ಪಾಲ್… ಮಾನಸೀಕತೆಗೂ ಬಂದಿಲ್ಲ
ಇದನ್ನೂ ಓದಿ; ಕಮಲ-ದಳ ಮೈತ್ರಿ ಸುದ್ದಿ: ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು’ ಎಂದ ಸಿಎಂ
ಗಾಂಧಿ, ಸರ್ದಾರ್ ವಲ್ಲಾಬಾಯ್ ಪಟೇಲ್ ಮಾನಸಿಕತೆಯಿಂದಲೂ ದೂರ ಹೋಗಿದ್ದಾರೆ, ಈಗ ಇರೋದು ಎಒ ಹ್ಯೂಮ್, ಆಂಟೋನಿಯೊ ಮೈನೋ ಮಾನಸೀಕತೆ ಪಾರ್ಟಿ ಅನ್ನೋದು ಅರ್ಥ ಆಗ್ತಿದೆ, ಇವರಿಂದ ದೇಶಕ್ಕೆ ಒಳ್ಳೆಯದು ಆಗೋದು ಬಹಳ ದೂರದ ಮಾತು, ಸಂವಿಧಾನದ ಆಶಯಗಳಿಗೂ ತದ್ವಿರುದ್ಧವಾಗಿರುವ ಪಾರ್ಟಿ, ಪ್ರಜಾಪ್ರಭುತ್ವವನ್ನ ವಂಶಪಾರಂಪರ್ಯ ಅಂತ ಭಾವಿಸಿರುವ ಪಾರ್ಟಿ ಕಾಂಗ್ರೆಸ್ ಎಂದು ಗುಡುಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.