Monday, December 11, 2023
spot_img
- Advertisement -spot_img

ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದವರಿಗೆ ಸ್ವಾಗತಿಸ್ತೇವೆ : ಡಿ.ಕೆ. ಸುರೇಶ್

ರಾಮನಗರ: ಸಂಘಟನೆ ವಿಚಾರವಾಗಿ ಕಾಂಗ್ರೆಸ್ ಸದಾಕಾಲ ಗಮನಹರಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ವಿದ್ಯುತ್ ಚಿತಾಗಾರ ಉದ್ಘಾಟನೆ ನಂತರ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದವರಿಗೆ ಸ್ವಾಗತಿಸ್ತೇವೆ, ಚುನಾವಣೆಗಳು ಬರುತ್ತವೆ ಹೋಗುತ್ತವೆ ಆದರೆ ಬೂತ್ ಮಟ್ಟದ ಸಂಘಟನೆ ಮಾಡಬೇಕು ಎಂದು ವಿವರಿಸಿದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ಜೊತೆ ನನಗೆ ಯಾವುದೇ ಸಂಪರ್ಕ ಇರಲಿಲ್ಲ : ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಕೂಡಾ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ, ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತೇವೆ, ಮುಂದೆ ಯಾರು ಬರುತ್ತಾರೋ ಕಾದು ನೋಡೋಣ, ಬರುವವರೆಗೆ ಸ್ವಾಗತ ಎಂದರು.

ಡಿಸಿಎಂ ಸ್ಥಾನ ಹೆಚ್ಚಳಕ್ಕೆ ಸಚಿವ ರಾಜಣ್ಣ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅವರನ್ನೇ ಕೇಳಿ, ನನಗೇನು ಗೊತ್ತಿಲ್ಲ ನಾನು ಒಬ್ಬ ಲೋಕಸಭಾ ಸದಸ್ಯ, ಸರ್ಕಾರ ನಡೆಸುತ್ತಿರುವವರು ರಾಜ್ಯ ನಾಯಕರು. ನೀವು ಅವರನ್ನೇ ಕೇಳಬೇಕು, ನಮ್ಮ ಪಕ್ಷದಲ್ಲಿ ಒಗ್ಗಟ್ಟಿದ್ದು, ನಾವು ತಳಮಟ್ಟದಿಂದ ಪಕ್ಷ ಸಂಘಟಿಸಲು ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು.

ಇಂಡಿಯಾ ಮೈತ್ರಿಕೂಟ ಮಾಧ್ಯಮದ ಆಂಕರ್ ಬಹಿಷ್ಕಾರ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮ್ಮ ನೈತಿಕತೆ ಎಲ್ಲಿ ಹೋಗಿತ್ತು , ಪ್ರಧಾನಿ ಮೋದಿಯನ್ನು ಪ್ರಶ್ನೆ ಮಾಡಿ, ಪ್ರಧಾನಿ ಮೋದಿಯನ್ನು ಯಾಕೆ ಇದುವರೆಗೆ ಪ್ರಶ್ನೆ ಮಾಡಿಲ್ಲ ನಿಮ್ಮ ಆತ್ಮವಾಲೋಕನ ಮಾಡಿಕೊಳ್ಳಿ ಎಂದು ಮಾಧ್ಯಮಗಳಿಗೆ ಸಂಸದ ಡಿ.ಕೆ.ಸುರೇಶ್ ಸಲಹೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles