Friday, September 29, 2023
spot_img
- Advertisement -spot_img

ರಾಜ್ಯದಲ್ಲಿ ಹಿಂದೂಗಳಿಗೆ ಕಾಂಗ್ರೆಸ್ ಅವಮಾನ ಮಾಡ್ತಿದೆ: ಬಸನಗೌಡ ಪಾಟೀಲ್ ಯತ್ನಾಳ

ಹುಬ್ಬಳ್ಳಿ : ರಾಜ್ಯದಲ್ಲಿ ಹಿಂದೂಗಳಿಗೆ ಅವಮಾನ ಮಾಡೋ ಕೆಲಸ ಕಾಂಗ್ರೆಸ್ ಸರ್ಕಾರ ಮಾಡ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ದೇಶದ ಎಲ್ಲರೂ ಕಾರ್ಯಕ್ರಮ ಮಾಡೋಕೆ ಅವಕಾಶ ಇದೆ, ಅಲ್ಲಿ ಕೇವಲ ಎರಡು ಬಾರಿ ನಮಾಜ್ ಮಾಡೋಕೆ ಅವಕಾಶ ಇದೆ, ಉಳಿದ ದಿನದಲ್ಲಿ ಯಾರು ಬೇಕಾದರೂ ಕಾರ್ಯಕ್ರಮ‌ ಮಾಡಬಹುದು, ನಮ್ಮ ಶಾಸಕರು ಹೋರಾಡಿದ್ದಾರೆ ಎಂದರು.

ಇವತ್ತು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಸಿಕ್ಕಿದೆ, ನ್ಯಾಯಾಲಯಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ, ಅದು ಅವರಪ್ಪನ ಆಸ್ತಿ ಅಲ್ಲ, ದೇಶದ ಆಸ್ತಿ ಸುಮ್ಮನೆ ನಮಾಜ್ ಮಾಡೋಕೆ ಅವಕಾಶ ಕೊಟ್ಟಿದೆ ಏನಾದರೂ ಮಾಡಿದ್ರೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಸರ್ಕಾರ ಅವರಿಗೆ ಸಹಕಾರ ಕೊಟ್ರೆ ನಾವು ಏನು ಮಾಡಬೇಕು ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಗದೀಶ್ ಶೆಟ್ಟರ್ ಏನೇ ಆಗಿದ್ರೂ ಅದು ಬಿಜೆಪಿಯಿಂದ, ಶೆಟ್ಟರ್ ರಿಂದ ಬಿಜೆಪಿಗೆ ಏನೂ ಆಗಿಲ್ಲ, ದುಡಿದವರು ಅಲ್ಲ‌ ದುಃಖ ಪಟ್ಟವರು ಅಲ್ಲ ಎಂದು ತಿಳಿಸಿದರು. ಬಿಜೆಪಿಗೆ ಭಯ‌ ಎಂದ ಶೆಟ್ಟರ್ ಗೆ ಟಾಂಗ್‌ ನೀಡಿದ ಯತ್ನಾಳ್ , ಜಗದೀಶ್ ಶೆಟ್ಟರ್ ಕಂಡ್ರೆ ಯಾಕೆ ಭಯ ? ಮಹೇಶ ಟೆಂಗಿನಕಾಯಿ ಯಾಕೆ ಗೆದ್ರು ಅವರ ಭಯ ಇದ್ರೆ ಯಾಕೆ ಟೆಂಗಿನಕಾಯಿ ಗೆದ್ರು ಎಂದ ಪ್ರಶ್ನೆ ಮಾಡಿದ್ದಾರೆ.

ಅನಿವಾರ್ಯ ಕಾರಣಕ್ಕೆ ಅವರು ಮುಖ್ಯಮಂತ್ರಿ ಆದರೂ, ಮಂತ್ರಿ ಆದರೂ ಎಲ್ಲ ಸ್ಥಾನ ಅವರು ಅನುಭವಿಸಿದ್ದರು. ಮುಖ್ಯಮಂತ್ರಿ ಆಗಿ ದುರ್ದೈವ ಮಂತ್ರಿ ಆದರೂ ಬಿಜೆಪಿಗೆ ಬೈಯೋಕೆ ಅವರ ನೈತಿಕತೆ ಇಲ್ಲ, ಸುಮ್ನೆ ಜಗದೀಶ್ ಶೆಟ್ಟರ್ ಬಾಯಿ ಬಿಡ್ತಿದ್ದಾರೆ, ಯಾವ ಲಿಂಗಾಯತರೂ ಅವರ ಜೊತೆ ಇಲ್ಲ, ಲಿಂಗಾಯತರಗೆ ಶೆಟ್ಟರ್ ಏನು ಮಾಡಿದ್ದಾರೆ? ಶೆಟ್ಟರ್ ವಿರುದ್ಧ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದಲ್ಲ ಬಹಳ ಹಗರಣ ಇವೆ ತನಿಖೆ ಮಾಡ್ತೀವಿ, ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಿದ್ದಾರೆ. ಯಡಿಯೂರಪ್ಪ ಹಿರಿಯ ನಾಯಕರು, ಪಕ್ಷ ಮತ್ತು ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಕೆಲಸ ಮಾಡಲು ಯಾರದೂ ತೊಂದರೆ ಅಲ್ಲ, ಅವರು ಸಂಘಟನೆ ಮಾಡ್ತೀನಿ ಅಂದ್ರೆ ತಪ್ಪಲ್ಲ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles