Wednesday, November 29, 2023
spot_img
- Advertisement -spot_img

ರೌಡಿಶೀಟರ್‌ಗಳಿಗೆ ಜೋಶಿ ಬೆಂಬಲ: ಅರವಿಂದ್ ಏಗನಗೌಡರ

ಧಾರವಾಡ: ಕಳೆದೆರಡು ದಿನಗಳ ಹಿಂದೆ ಇಲ್ಲಿನ ಶಹರ ಠಾಣೆಯ ಸಿಪಿಐ ಕಾಡದೇವರಮಠ ಅವರಿಗೆ ಬಹಿರಂಗ ನಿಂದನೆ‌ ಹಿನ್ನೆಲೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಚಳುವಳಿ ನಡೆಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೌಡಿಶೀಟರ್‌ಗಳನ್ನು ಬೆಂಬಲಿಸುವ ಮೂಲಕ ಸಿಪಿಐ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೈದಿರುವುದು ಸರಿಯಲ್ಲ. ಸಚಿವರು ಕೂಡಲೇ 15 ದಿನದೊಳಗೆ ಪೊಲೀಸ್ ಅಧಿಕಾರಿಯ ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ಜಿಲ್ಲೆಯಾದ್ಯಂತ ಪತ್ರ ಚಳವಳಿ ಮಾಡುವ ಮೂಲಕ ಪ್ರಧಾನಿಯವರಿಗೆ ಜೋಶಿ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ನಮ್ಮ ಪ್ರಣಾಳಿಕೆಗಳನ್ನು ಬಿಜೆಪಿ ಕಾಪಿ ಮಾಡ್ತಿದೆ: ಶಾಮನೂರು ಶಿವಶಂಕರಪ್ಪ

ಕೇಂದ್ರ ಸಚಿವರ ಕುಮ್ಮಕ್ಕು ಇದೆ ಎಂದು ಬಿಜೆಪಿ ನಾಯಕರು ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇತ್ತೀಚೆಗೆ ರೌಡಿಶೀಟರ್‌ ಎದುರಿಗೆ ಸಿಪಿಐ ಅವರನ್ನು ಜೋಶಿ ಅವರು ಬೆದರಿಸಿದ್ದಾರೆ, ಅವರ ವರ್ತನೆ ಸರಿಯಾಗಿಲ್ಲ. ಅವರು ಕ್ಷುಲ್ಲಕ ಕಾರಣಕ್ಕೆ ಅಧಿಕಾರಿಯ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂಬ ಮಾತುಗಳನ್ನಾಡಿದ್ದಾರೆ ಎಂದು ಮುಖಂಡ ಅರವಿಂದ್ ಏಗನಗೌಡರ ಕಿಡಿಕಾರಿದ್ದಾರೆ.

ರೌಡಿಶೀಟರ್ ಎದುರು ಪೊಲೀಸ್‌ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ.
ಕಾನೂನನ್ನು ಪಾಲನೆ ಮಾಡಬೇಕಾದ ಸಚಿವರೇ ಈ ರೀತಿಯಾಗಿ ವರ್ತಿಸಬಾರದು. ಜೋಶಿ ಅವರ ಕುಮ್ಮಕ್ಕಿನಿಂದ ರೌಡಿಗಳು ಬಾಲ ಬಿಚ್ಚಿದ್ದಾರೆ, ಸೋಲಿನ ಭೀತಿಯಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು, ಇಲ್ಲದೇ ಹೋದರೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿಗೆ ಪತ್ರ ಚಳುವಳಿ ಮಾಡುತ್ತೇವೆ ಎಂದು ಏಗನಗೌಡರ ಎಚ್ಚರಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles