ಲಕ್ನೋ: ಕೇಸರಿ ಬಟ್ಟೆ ಕಳಚಿಟ್ಟು, ಮಾಡ್ರೆನ್ ಬಟ್ಟೆಗಳನ್ನು ಧರಿಸಿ , ಪ್ರತಿದಿನ ಧರ್ಮದ ಬಗ್ಗೆ ಮಾತನಾಡಬೇಡಿ, ಕೇಸರಿ ಬಟ್ಟೆಗಳನ್ನು ಧರಿಸಬೇಡಿ ಮತ್ತು ಸ್ವಲ್ಪ ಮಾಡರ್ನ್ ಆಗಿರಿ ಎಂದುಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಸರಿ ಉಡುಪಿನ ಬಗ್ಗೆ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಹುಸೇನ್ ದಳವಾಯಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಿಂದ ಉದ್ಯಮಗಳನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಬದಲು ತನ್ನದೇ ರಾಜ್ಯದಲ್ಲಿ ಹೊಸದಾಗಿ ಉದ್ಯಮಗಳನ್ನು ಯೋಗಿ ಆದಿತ್ಯನಾಥ್ ಆರಂಭಿಸಲಿ ಎಂದು ಹೇಳಿದ್ದಾರೆ. ಮಹಾರಾಷ್ಟ್ರವು ಕೈಗಾರಿಕಾ ಉದ್ಯಮಕ್ಕೆ ಉತ್ತಮ ಸೌಲಭ್ಯಗಳನ್ನು ಒದಗಿಸಿದೆ. ಹಾಗಾಗಿ ಮಹಾರಾಷ್ಟ್ರದಿಂದ ಕೈಗಾರಿಕೆಗಳನ್ನು ತೆಗೆದುಕೊಂಡು ಹೋಗುವ ಬದಲು ಉತ್ತರ ಪ್ರದೇಶದಲ್ಲಿಯೇ ಹೊಸ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು.
ಉದ್ಯಮ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುವ ವಾತಾವರಣ ನಿರ್ಮಿಸಿ, ಆದಿತ್ಯನಾಥ್ ಕೊಂಚ ಆಧುನಿಕತೆ ಅಳವಡಿಸಿಕೊಳ್ಳಬೇಕು ಉದ್ಯಮವು ಆಧುನಿಕತೆಯ ಸಂಕೇತವಾಗಿರುವುದರಿಂದ ಯೋಗಿ ಆದಿತ್ಯನಾಥ್ ಅವರು ಕೂಡ ಕೊಂಚ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.