ನವದೆಹಲಿ: ಯುರೋಪ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾರತದಲ್ಲಿ ನಡೆಯುತ್ತಿರುವ G20 ಶೃಂಗಸಭೆಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, GOI ನಮ್ಮ ಬಡ ಜನರು ಮತ್ತು ಪ್ರಾಣಿಗಳನ್ನು ಮರೆಮಾಚುತ್ತಿದೆ. ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಚುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಯುರೋಪ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗಲೂ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.
ನಿನ್ನೆ ಬ್ರೂಸೆಲ್ಸ್‌ನಲ್ಲಿ ಮಾತನಾಡಿದ್ದ ರಾಹುಲ್, ಭಾರತದಲ್ಲಿ ಪ್ರಜಾಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಸಂವಿಧಾನದ ರಚನೆಯನ್ನು ನಿಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತದಲ್ಲಿ ತಾರತಮ್ಯ ಹಿಂಸೆ ಹೆಚ್ಚಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ನಡೆಯತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದರು.
ಇದನ್ನೂ ಓದಿ: ಭಾರತ ಸಂವಿಧಾನದ ರಚನೆಯನ್ನೇ ನಿಗ್ರಹಿಸಲಾಗುತ್ತಿದೆ: ರಾಹುಲ್ ಆರೋಪ
ಈ ವಿಷಯಗಳ ಬಗ್ಗೆ ಐರೋಪ್ಯ ಒಕ್ಕೂಟದ ಸದಸ್ಯರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ರಚನೆಗಳನ್ನು ನಿಗ್ರಹಿಸುತ್ತಿರುವ ಪ್ರಯತ್ನಗಳು ಅವರ ಗಮನಕ್ಕೆ ಬಂದಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದರು.
ನನ್ನ ಪ್ರಕಾರ ಭಾರತವು ಖಂಡಿತವಾಗಿಯೂ ಸಂಬಂಧವನ್ನು ಹೊಂದಿದೆ. ರಷ್ಯಾ ಮತ್ತು ಭಾರತವು ಅಮೆರಿಕದೊಂದಿಗೆ ಸಂಬಂಧ ಹೊಂದಿದೆ. ಭಾರತ ದೊಡ್ಡ ದೇಶವಾಗಿದ್ದು, ಹಲವು ದೇಶಗಳೊಂದಿಗೆ ಸಂಬಂಧ ಹೊಂದಿದೆ. ಇದು ಸಾಮಾನ್ಯ ಸಂಗತಿ ಎಂದು ರಾಹುಲ್ ಮಾತನಾಡಿದ್ದರು.
ಸದ್ಯ ಪ್ಯಾರೀಸ್‌ನಲ್ಲಿರುವ ರಾಹುಲ್ ಗಾಂಧಿ ವಿವಿಧ ಚರ್ಚೆಗಳಲ್ಲಿ ತೊಡಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.