ಜಮ್ಮು-ಕಾಶ್ಮೀರ: ಲಡಾಖ್ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೇಹ್‌ನಲ್ಲಿರುವ ಖರ್ದುಂಗ್ ಲಾಗೇ ಭೇಟಿ ನೀಡಿದರು. ಖರ್ದುಂಗ್ ಲಾ ಅನ್ನು ವಿಶ್ವದ ಅತಿ ಎತ್ತರದ ಮೋಟಾರ್ ಪಾಸ್ ಎಂದು ಕರೆಯಲಾಗುತ್ತದೆ.
ಬೈಕ್‌ನಲ್ಲೇ ಖರ್ದುಂಗ್ ಲಾ ಪ್ರದೇಶಕ್ಕೆ ತೆರಳಿರುವ ರಾಹುಲ್ ಗಾಂಧಿ, ಅಲ್ಲಿನ ಜನರೊಂದಿಗೆ ಕೆಲಸಕಾಲ ಮಾತುಕತೆ ನಡೆಸಿದರು. ಲಡಾಖ್‌ಗೆ ಬೈಕ್‌ನಲ್ಲಿ ತೆರಳಿರುವ ರಾಹುಲ್, ಆಗಸ್ಟ್ 25ರವರೆಗೆ ಅಲ್ಲಿಯೇ ಇರಲಿದ್ದಾರೆ.
ನಿನ್ನೆಯಷ್ಟೇ ತಮ್ಮ ತಂದೆ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಲೇಹ್‌ನ ಪ್ಯಾಂಗಾಂಗ್ ಸರೋವರದ ಬಳಿ ವಿಶೇಷವಾಗಿ ಆಚರಿಸಿದ್ದರು. ಭಾರತ್ ಜೋಡೋ ಯಾತ್ರೆ ವೇಳೆಯೇ ನಾನು ಲಡಾಖ್‌ಗೆ ಬರಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಹಾಗಾಗಿ, ಸಂಪೂರ್ಣವಾಗಿ ಇಲ್ಲಿಗೇ ಪ್ರವಾಸ ಕೈಗೊಂಡಿದ್ದೇನೆ. ನುಬ್ರಾ ಹಾಗೂ ಕಾರ್ಗಿಲ್‌ಗೆ ಭೇಟಿ ನೀಡುತ್ತೇನೆ. ಜನರ ಕಷ್ಟಗಳನ್ನು ಆಲಿಸುವುದು ನನ್ನ ಉದ್ದೇಶ ಎಂದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.