Monday, March 27, 2023
spot_img
- Advertisement -spot_img

ಬಿಜೆಪಿ ಸರ್ಕಾರ ದೇಶದ ಅತಿದೊಡ್ಡ ಭ್ರಷ್ಟ ಸರ್ಕಾರ ಆಗಿದೆ :ರಣದೀಪ್‌ ಸಿಂಗ್‌ ಸುರ್ಜೇವಾಲಾ

ಹೊಸಪೇಟೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ದೇಶದ ಅತಿದೊಡ್ಡ ಭ್ರಷ್ಟ ಸರ್ಕಾರ ಆಗಿದೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ನಲವತ್ತು ಪರ್ಸೆಂಟ್ ಸರ್ಕಾರ , ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದರು. ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಸರ್ಕಾರ ಹೊಣೆಯಾಗಿದೆ. ಮೃತಪಟ್ಟ ಗುತ್ತಿಗೆದಾರರ ಕುಟುಂಬಗಳ ಪರ ಕಾಂಗ್ರೆಸ್‌ ನಿಂತಿದೆ ಎಂದರು.

ಚುನಾವಣಾ ಪ್ರಣಾಳಿಕೆಯಲ್ಲಿ 165 ಭರವಸೆ ಕೊಟ್ಟಸರ್ಕಾರ ಎಲ್ಲ ಅಂದರೆ 159 ಭರವಸೆ ಈಡೇರಿಸಿದಂತ ಏಕೈಕ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯ ಸರ್ಕಾರ ಅದನ್ನು ಹೊರತುಪಡಿಸಿ 30 ಹೆಚ್ಚುವರಿ ಭರವಸೆ ಕೂಡಾ ಈಡೇರಿಸಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಎಂದೆಂದೂ ಕಾಣದ ದರಿದ್ರ ಮುಖ್ಯಮಂತ್ರಿಯನ್ನು ಬಿಜೆಪಿಯವರು ಮಾಡಿದ್ದಾರೆ. ಈ ರಾಜ್ಯದ 6.5 ಕೋಟಿ ಜನತೆ ಮನಸ್ಸಿಗೆ ಮತ್ತು ಮರ್ಯಾದೆಗೆ ಧಕ್ಕೆ ತರುವಂತ ಕೆಲಸ ಮಾಡಿದ್ದಾರೆ ಎಂದರು.

Related Articles

- Advertisement -

Latest Articles