ವಿಜಯಪುರ:ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಜಯಪುರದಲ್ಲಿ ಮಾತನಾಡಿ, ಅಸೆಂಬ್ಲಿಯಲ್ಲಿ ಬಿ.ಎಸ್ ಯಡಿಯೂರಪ್ಪ ಮಾತನಾಡಿದ್ದಾರೆ. ಪಾಪ ನನ್ನ ಮೇಲೆ ಬಹಳ ಪ್ರೀತಿಯಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡು ಅಂತ ಹೇಳಿದ್ದಾರೆ, ಅವರಿಗೆ ಧನ್ಯವಾದ, ದೇವರು ಅವರಿಗೆ ಆಯುಷ್ಯ, ಆರೋಗ್ಯ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ನಾನು ಬಾದಾಮಿಯಲ್ಲಿ ಗೆಲ್ಲಲ್ಲ ಅಂತಲ್ಲ. ಬಾದಾಮಿಯಲ್ಲಿ 100ಕ್ಕೆ ನೂರು ಗೆಲ್ತೀನಿ. ಶಾಸಕನಾಗಿ ಆ ಜನರಿಗೆ 5 ವರ್ಷ ಅವರ ಕಷ್ಟ-ಸುಖಕ್ಕೆ ಸ್ಪಂದಿಸಿದ್ದೀನಿ, ಅವರ ಕೆಲಸಗಳನ್ನ ಮಾಡಿದ್ದೀನಿ. ಬಾದಾಮಿಯಲ್ಲಿ ಜನರಿಗೆ ದ್ರೋಹ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.
ನಾನು ಎಲ್ಲಿ ನಿಲ್ಲಬೇಕು ಅನ್ನೋದನ್ನ ನಾನೇ ತೀರ್ಮಾನ ಮಾಡಿಕೊಳ್ತೇನೆ. ಯಡಿಯೂರಪ್ಪ ತೀರ್ಮಾನ ಮಾಡೋದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಎಲ್ಲಾ ಜಾತಿ, ಧರ್ಮದ ಬಗ್ಗೆ ಗೌರವವಿಟ್ಟುಕೊಂಡಿದ್ದೇವೆ. ಎಲ್ಲಾ ಜಾತಿಯಲ್ಲಿರುವ ಬಡವರಿಗೆ ಕಾರ್ಯಕ್ರಮ ನೀಡಿದ್ದೇವೆ ಎಂದರು.