ಚಾಮರಾಜನಗರ: ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ವರ್ಸಸ್ ಕಾಂಗ್ರೆಸ್ ಮುಖಂಡರ ಜಟಾಪಟಿ ಮುಂದುವರೆದಿದ್ದು, ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ರು.
ಸಿಎಂ ಸಿದ್ದರಾಮಯ್ಯ ಅವರ ಸಾಧನೆಯ ದಾಖಲೆ ತರುತ್ತೇನೆ, ನೀವು ನಿಮ್ಮ ಅವಧಿಯಲ್ಲಿ ಮಾಡಿರುವ ಕೆಲಸಗಳ ದಾಖಲೆಗಳನ್ನ ತನ್ನಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ರು. ಅದರಂತೆ ಇಂದು ಸಂಸದರ ಕಚೇರಿ ಬಳಿ ಎಂ.ಲಕ್ಷ್ಮಣ್ ಕಾರ್ಯಕರ್ತರ ಜೊತೆ ತೆರಳಿದ್ರು.
ಆದ್ರೆ ಎಷ್ಟೇ ಹೊತ್ತಾದರೂ ಪ್ರತಾಪ್ ಸಿಂಹ ಚರ್ಚೆಗೆ ಆಗಮಿಸಲೇ ಇಲ್ಲ, ಮೈಸೂರಿನ ಜಲದರ್ಶನಿ ಬಳಿಯಿರುವ ಸಂಸದ ಪ್ರತಾಪ ಸಿಂಹ ಕಚೇರಿ ಬಳಿ ಹೈಡ್ರಾಮಾವೇ ನಡೆದು ಹೋಯ್ತು. ಕೊನೆಗೆ ಪ್ರತಾಪ್ ಸಿಂಹ ಆಪ್ತ ಸಹಾಯಕರಿಗೆ ದಾಖಲೆ ಸಲ್ಲಿಸಿ, ಕಾಂಗ್ರೆಸ್ ನಾಯಕರು ಹೊರ ನಡೆದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.