ಬೆಂಗಳೂರು: ‘ನಮ್ಮ ನಿಮ್ಮ ಕಾಂಗ್ರೆಸ್ ಪ್ರಣಾಳಿಕೆ’ ಎಂಬ ಹೆಸರಿನ ಪ್ರೋಮೋ ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿ, ”ನಾಲ್ಕು ತಿಂಗಳ ಹಿಂದೆ ಜವಾಬ್ದಾರಿ ಕೊಟ್ಟಿದ್ರು. ಕಚೇರಿಯಲ್ಲಿ ಪ್ರಣಾಳಿಕೆ ತಯಾರಿಕೆ ಆಗಬಾರದು. ಜಲ್ವಂತ ಸಮಸ್ಯೆಗಳಿವೆ. ಇವುಗಳ ಬಗ್ಗೆ ಜನರ ಅಭಿಪ್ರಾಯ ಹಾಗೂ ಸಲಹೆ ಪಡೆದಿದ್ದೇವೆ. ನೌಕರರ ವರ್ಗದ ಜೊತೆ ಚರ್ಚಿಸಿದ್ದೇವೆ. ಎಫ್ಕೆಸಿಸಿ ಜೊತೆಗೂ ಸುದೀರ್ಘವಾಗಿ ಮಾತನಾಡಿದ್ದೇವೆ” ಎಂದು ತಿಳಿಸಿದರು.
”ನಮ್ಮ ಬಳಿಯ ಚರ್ಚೆ ಮಾಡಿಯೇ ಗ್ಯಾರೆಂಟಿಗಳನ್ನು ಘೋಷಣೆ ಮಾಡಿರೋದು. ನನ್ನ ಅನುಪಸ್ಥಿಯಲ್ಲಿ ಘೋಷಣೆ ಮಾಡಿರಬಹುದು. ಆದ್ರೆ ನನ್ನ ಜೊತೆ ಚರ್ಚೆ ಮಾಡಿದ್ರು. ಈಡೇರುವಂತಹ ಭರವಸೆಗಳನ್ನ ಮಾತ್ರ ಕೊಡ್ತೇವೆ. ನಾವು ಬಿಜೆಪಿಯನ್ನೇ ಕಿತ್ತುಹಾಕೋಣ ಅಂತಿದ್ದೇವೆ. ಸಿಎಂ ರೇಸ್ ಚರ್ಚೆಗೆ ನಾನು ಯಾವುದೇ ಉತ್ತರವನ್ನೂ ಕೊಡಲ್ಲ. ಚುನಾವಣೆ ಮುಗಿದ ಮೇಲೆ ಅದನ್ನು ಚರ್ಚೆ ಮಾಡೋಣ. ಈಗ ಸಿಎಂ ರೇಸ್ ವಿಚಾರ ಅಪ್ರಸ್ತುತ. ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ” ಎಂದರು.