ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ ಗೆ ಈಗಿನಿಂದಲೇ ತಯಾರಿಗಳು ಆರಂಭವಾಗಿದ್ದು, ನಾಗಮಂಗಲದಲ್ಲಿ ಶಿವರಾಮೇಗೌಡ ರನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದ್ದು, ಇತ್ತ ಮಂಡ್ಯದಿಂದ ಚಲುವರಾಯಸ್ವಾಮಿ ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ.
ಭಾರತ್ ಜೋಡೋ ಯಾತ್ರೆ ಯಿಂದ ಸಿದ್ಧತೆ ತಯಾರಾಗುತ್ತಿದೆ. ಶಿವರಾಮೇಗೌಡ-ಚಲುವರಾಯಸ್ವಾಮಿ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಡಿಕೆಶಿ ಜೊತೆ ಶಿವರಾಮೇಗೌಡ ನಡೆಸಿರುವ ಮಾತುಕತೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಶಿವರಾಮೇಗೌಡ ಜೆಡಿಎಸ್ ಸೋಲಿಸಲು ಮತ್ತೆ ಮರಳಿ ಕಾಂಗ್ರೆಸ್ ಬರಲು ನಿರ್ಧಾರ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇತ್ತ ಚಲುವರಾಯಸ್ವಾಮಿ ಜೆಡಿಎಸ್ ಮಣಿಸಲು ಕ್ಷೇತ್ರ ಬದಲಾವಣೆಯತ್ತ ಮುಂದಾಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಬೆಂಬಲಿಗರು ಹಾಗೂ ಅಭಿಮಾನಿಗಳ ಒತ್ತಾಸೆ ಮೇರೆಗೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸುತ್ತೇನೆ ಎಂದು ಮುಖಂಡ ಎಲ್.ಆರ್. ಶಿವರಾಮೇಗೌಡ ಹೇಳಿದ್ದರು. ತಾಲ್ಲೂಕಿಗೆ ಜನಪರವಾದ ಕೆಲಸ ಮಾಡುವ, ಜನರಿಗಾಗಿ ಸ್ಪಂದಿಸುವ ಮುಖಂಡರ ಅವಶ್ಯಕತೆಯಿದೆ ಎಂದಿದ್ದರು. ಇದೀಗ ಡಿಕೆಶಿ ಜೊತೆ ಶಿವರಾಮೇಗೌಡ ನಡೆಸಿರುವ ಮಾತುಕತೆ ಬೆನ್ನಲ್ಲೇ ಶಿವರಾಮೇಗೌಡ ಮರಳಿ ಕಾಂಗ್ರೆಸ್ ಬರಲು ನಿರ್ಧಾರ ಮಾಡಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ.