ಬೆಂಗಳೂರು: ಮಂಜುನಾಥ್ ಗೌಡ್ರೇ ನೀವು ಮನೆಗೆ ಹೋಗಿ ಎಂದರೆ ಹೋಗುತ್ತೇನೆ, ಬಿಜೆಪಿಯನ್ನು ಸೋಲಿಸೋದು ನಮ್ಮ ಗುರಿ. ಈ ಸಲ ನಾವು ಗೆಲ್ಲುವುದರದಲ್ಲಿ ಅನುಮಾನ ಇಲ್ಲ ಎಂದು ಟಿಕೆಟ್ ಆಕಾಂಕ್ಷಿ ಮಂಜುನಾಥ್ ಗೌಡ ಹೇಳಿದರು.
ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಹಿನ್ನೆಲೆ ಸಂಧಾನ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಟಿಕೆಟ್ ವಿಚಾರ ಅಧ್ಯಕ್ಷರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ನಾಲ್ಕನೇ ತಾರೀಕು ಅಭ್ಯರ್ಥಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಒಬ್ಬರಿಗೆ ವಿಧಾನಸಭೆ, ಒಬ್ಬರಿಗೆ ವಿಧಾನ ಪರಿಷತ್ ಅಂತಾ ಹೇಳಿದರು. ನನ್ನ ಡಿಮ್ಯಾಂಡ್ ನನಗೇ ಟಿಕೆಟ್ ಕೊಡ್ತಾರೆ ಎಂದುಕೊಂಡಿದ್ದೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ನಾನು ಒಂದಲ್ಲ ಮೂರು ಮೆಟ್ಟಿಲು ಇಳಿಯೋಕೆ ರೆಡಿ. ಸಭೆಯಲ್ಲಿ ನಮ್ಮಿಬ್ಬರ ಕಡೆಯಿಂದಲೂ ಒಂದೇ ರೆಸ್ಪಾನ್ಸ್ ಬಂತು. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಒಗ್ಗಟ್ಟಾಗಿ ಕೆಲಸ ಮಾಡೋದಾಗಿ ಹೇಳಿದ್ದೇವೆ. ಎಲ್ಲಾ ಹೇಳೋಕೆ ನಾನು ಜ್ಯೋತಿಷ್ಯ ಕಲಿಬೇಕಷ್ಟೇ ಎಂದು ಹೇಳಿದ್ದಾರೆ.