Sunday, October 1, 2023
spot_img
- Advertisement -spot_img

ವೇದಿಕೆ ಮೇಲೆ ಕಾಂಗ್ರೆಸ್ ಶಾಸಕಿಗೆ ಚಾಕು ಇರಿತ!

ಛತ್ತೀಸ್‌ಗಢ: ವೇದಿಕೆ ಮೇಲೆ ಕಾಂಗ್ರೆಸ್ ಶಾಸಕಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ. ಇಲ್ಲಿನ ರಾಜ್‌ನಂದಗಾಂವ್ ಜಿಲ್ಲೆಯಲ್ಲಿ ಭಾನುವಾರ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಖಿಲೇಶ್ವರ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಜ್‌ನಂದಗಾಂವ್ ಕ್ಷೇತ್ರ ಪ್ರತಿನಿಧಿಸುವ ಶಾಸಕಿ ಚನ್ನಿ ಚಂದು ಸಾಹು ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಸಂದೀಪ್ ಜಾಖರ್ ಅಮಾನತು!

ಡೊಂಗರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಜೋಧಾರ ಗ್ರಾಮದಲ್ಲಿ ವೇದಿಕೆ ಮೇಲಿದ್ದಾಗ ಏಕಾಏಕಿ ವೇದಿಕೆ ಮೇಲೆ ಬಂದ ಆತ ಚಾಕು ತೆಗೆದು ಇರಿದಿದ್ದಾನೆ. ಘಟನೆಯಲ್ಲಿ ಶಾಸಕಿಯ ಮಣಿಕಟ್ಟಿನ ಭಾಗದಲ್ಲಿ ಗಾಯವಾಗಿದ್ದು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಸೆ.1ಕ್ಕೆ I.N.D.I.A ಒಕ್ಕೂಟದ ಲೋಗೋ ರಿವೀಲ್!

ಪ್ರಾಥಮಿಕ ತನಿಖೆಯಲ್ಲಿ ಆತ ಮದ್ಯ ಸೇವಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇದು ಪೂರ್ವ ನಿಯೋಜಿತ ಕೃತ್ಯವಲ್ಲ ಎಂದಿದ್ದಾರೆ. ಈ ಘಟನೆ ಸಂಬಂಧ ಬಿಜೆಪಿ ಆಕ್ರೋಶ ಹೊರಹಾಕಿದ್ದು, ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಅಡಿಯಲ್ಲಿ ಸುರಕ್ಷಿತವಾಗಿಲ್ಲ, ಸಿಎಂ ಭೂಪೇಶ್ ಬಘೇಲ್ ನೇತೃತ್ವದ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಪಕ್ಷದ ನಾಯಕರಿಗೆ ಈ ಪರಿಸ್ಥಿತಿಯಾದರೆ ಸಾಮಾನ್ಯ ಜನರ ಗತಿಯೇನು ಎಂದು ಪ್ರಶ್ನಿಸಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles