ಬೆಳಗಾವಿ: ಶಿವಾಜಿ ಪ್ರತಿಮೆಯನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಅನಾವರಣ ಗೊಳಿಸಿ ದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿ, ಅರ್ಧ ಬಣ್ಣ ಬಳಿದ ಮೂರ್ತಿಯನ್ನು 12 ನಿಮಿಷದಲ್ಲಿ ಸಿಎಂ ಬೊಮ್ಮಾಯಿಯವರಿಂದ ಉದ್ಘಾಟನೆ ಮಾಡಿಸಿದ್ರು. ಈ ಕಾರ್ಯದಿಂದ ಶಿವಾಜಿ ಮಹಾರಾಜರಿಗೆ ದೊಡ್ಡ ಅಪಮಾನವಾಗಿದೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
ಈ ಮಹಾರಾಜರ ಮೂರ್ತಿಯನ್ನ ಸ್ಥಾಪಿಸಲು ಎರಡು ಕೇಸ್ ನನ್ನ ಮೇಲೆ ಹಾಕಿದ್ದಾರೆ. ಸತ್ಯಮೇವ ಜಯತೆ ಎಂದು ಬರಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು. ನಿಸ್ವಾರ್ಥದಿಂದ ಐದು ವರ್ಷ ಕೆಲಸ ಮಾಡಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಮೇಲೆ ಇರಲಿ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ದೇವರಲ್ಲಿ ರಾಜಕಾರಣ ಮಾಡುವುದು ಬೇಕಾಗಿಲ್ಲ ನೀವೇ ನನ್ನ ದೇವರು, ತಪ್ಪು ಮಾಡಿದ್ರು, ಪ್ರತಿಷ್ಠಾಪನೆ ವಿಚಾರದಲ್ಲಿ ಅವರು ರಾಜಕೀಯ ಮಾಡಿದ್ರು. ಸಿದ್ದೇಶ್ವರನ ಮೇಲೆ ಪ್ರಮಾಣ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದರು.