ಬೆಂಗಳೂರು: ಸ್ವಪಕ್ಷೀಯರ ವಿರುದ್ಧ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಂತೆ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಚಂದಮಾಮದಲ್ಲಿ ಬರುತ್ತಿದ್ದ “ದಿನಕ್ಕೊಂದು ಕತೆ”ಯಂತೆ ಬಿಜೆಪಿಯಲ್ಲಿ ದಿನಕ್ಕೊಂದು ವ್ಯಥೆ ಹೊರಬರುತ್ತಿದೆ! ಎಂದು ವ್ಯಂಗ್ಯವಾಡಿದೆ.
‘ಬಿಜೆಪಿಯಲ್ಲಿ ಸಭೆ ಕರೆಯುವವರು ಗತಿ ಇಲ್ಲ, ನಾಯಕತ್ವವೇ ಇಲ್ಲ, ಬಿಜೆಪಿಯನ್ನು ಯಾರೋ ಅದೃಶ್ಯ ವ್ಯಕ್ತಿಯೊಬ್ಬರು ನಿಯಂತ್ರಿಸುತ್ತಿದ್ದಾರೆ ಎಂದಿದ್ದಾರೆ ಬಿಜೆಪಿಯ ರೇಣುಕಾಚಾರ್ಯ. ಯಾರು ಆ “ಸಂತೋಷ”ದಿಂದಿರುವ ಅದೃಶ್ಯ ವ್ಯಕ್ತಿ ? ವಿಪಕ್ಷ ನಾಯಕ, ರಾಜ್ಯಾಧ್ಯಕ್ಷನ ಆಯ್ಕೆಯಾಗದಂತೆ ತಡೆದಿರುವುದು ಅದೇ ಅದೃಶ್ಯ ವ್ಯಕ್ತಿಯೇ? ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ಬೊಮ್ಮಾಯಿ ʼಭ್ರಷ್ಟಾಚಾರʼ ಶಬ್ಧವನ್ನ ಮರೆಯಲಿ: ಜಿ.ಪರಮೇಶ್ವರ್
ಎಂಪಿಆರ್ ಹೇಳಿದ್ದೇನು?
ರೇಣುಕಾಚಾರ್ಯ ಬೆಳೆಯುತ್ತಾನೆಂದು ತುಳಿಯುವ ಕೆಲಸ ಮಾಡಿದರು. ನಾನು ಮಾತನಾಡಿದ ತಕ್ಷಣ, ರೇಣುಕಾಚಾರ್ಯ ಪಕ್ಷ ಬಿಡುತ್ತಾನೆ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಯಾರು ರಾಜಕೀಯವಾಗಿ ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ. ವಿಜಯೇಂದ್ರ ಅವರಿಗೆ ಸಾಮರ್ಥ್ಯ ಇದೆ. ಆದರೆ, ಅವಕಾಶ ಕೊಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.