ಕೋಲಾರ: ದೇಶದ್ರೋಹಿ ಸಂಘಟನೆಗಳನ್ನು, ಮಟ್ಟ ಹಾಕಿ ಬಗ್ಗು ಬಡಿಯುತ್ತೇವೆ.ದಿನ ನಿತ್ಯ ಅಮಾಯಕ ಹೆಣ್ಣು ಮಕ್ಕಳು ಬಲಿ ಆಗ್ತಿದ್ದು, ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ ನವರು ತಲೆಕೆಡಿಸಿಕೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಕಟ್ಟನಿಟ್ಟಾಗಿ ಜಾರಿಗೆ ಬರಬೇಕು ಎಂದು ಸಿಎಂ ಜೊತೆ ಚರ್ಚೆ ಮಾಡ್ತೇನೆ. ಇವರು ಒಂದು ಸಂಘಟನೆ ಬ್ಯಾನ್ ಮಾಡಿದ್ರೆ ಇನ್ನೊಂದು ಹೊಸ ಸಂಘಟನೆ ಮಾಡುವ ಗೋಮುಕ ವ್ಯಾಘ್ರಗಳು ಎಂದಿದ್ದಾರೆ.ದಿನ ನಿತ್ಯ ಅಮಾಯಕ ಹೆಣ್ಣು ಮಕ್ಕಳು ಬಲಿ ಆಗ್ತಿದ್ದಾರೆ.
ನಾನು ಗೃಹ ಸಚಿವ ಇದ್ದಾಗ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮೊದಲು ಇದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತೆ. ಒಬ್ಬ ಹಿಂದೂ ಯುವತಿಯನ್ನು ಮತಾಂತರ ಮಾಡಿದ್ರೆ ನಾಲ್ಕೈದು ಲಕ್ಷ ನೀಡಲಾಗ್ತಿದೆ ಎಂದರು. ದೇಗುಲಗಳಲ್ಲಿ ಮೊಬೈಲ್ ನಿಷೇಧ ಮಾಡಿರುವುದು ಒಳ್ಳೆಯದು. ಸಚಿವೆ ಶಶಿಕಲಾ ಜೊಲ್ಲೆ ಬಳಿ ನಾನು ಸಹ ಚರ್ಚೆ ಮಾಡುತ್ತೇನೆ.
ಮೊಬೈಲ್ ನಿಂದ ಪೂಜಾರಿಗಳು ಮಂತ್ರ ಹೇಳೊದಕ್ಕೂ ಕಷ್ಟವಾಗ್ತಿದೆ. ನಮ್ಮ ರಾಜ್ಯದ ದೇವಸ್ಥಾನಗಳಲ್ಲೂ ಮೊಬೈಲ್ ಬಂದ್ ಮಾಡಿದ್ರೆ ಒಳ್ಳೇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.