ಶಿವಮೊಗ್ಗ : ಕಾವೇರಿ ಹೋರಾಟ ಸಮಿತಿ ಬಂದ್ ಕರೆದಿದೆ, ನೆಲಜಲ ಭಾಷೆ ಪರವಾಗಿರುವ ಸಂಘಟನೆಗಳು, ರಾಜಕೀಯ ಪಕ್ಷಗಳು ಇದಕ್ಕೆ ಬೆಂಬಲ ನೀಡಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಕರ್ನಾಟಕ ಬಂದ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋರಾಟಕ್ಕೆ ನ್ಯಾಯ ಒದಗಿಸಲು ಎಲ್ಲರ ಸಹಕಾರ ಬೇಕಾಗುತ್ತದೆ. ಮೊನ್ನೆ ದೆಹಲಿಯಲ್ಲಿ ಮುಖ್ಯಮಂತ್ರಿ ಗಳು ಸಂಸದರ ಸಭೆ ಕರೆದಿದ್ದರು, ಅಲ್ಲಿ ಮಾಧ್ಯಮದವರು ಇರಲಿಲ್ಲ ಎಂದರು.
ಇದನ್ನೂ ಓದಿ : ಸಿನಿಮಾ ನಟರು ಹೋರಾಟಕ್ಕೆ ಬರಲ್ಲಾ ಅಂತೀರಾ, ಬಂದ್ರೆ ಸಮಸ್ಯೆ ಬಗೆಹರಿಯುತ್ತಾ?; ಶಿವರಾಜ್ ಕುಮಾರ್
ಒಳಗಡೆ ಕೇಂದ್ರದ ಅಧಿಕಾರಿಗಳು, ನಾಯಕರು ಸಹಕಾರ ನೀಡಿದ್ದಕ್ಕೆ ಸಿಎಂ ಪ್ರಶಂಸೆ ವ್ಯಕ್ತ ಪಡಿಸಿದ್ದರು. ಸಭೆಯಿಂದ ಹೊರಗಡೆ ಬಂದು ಕೇಂದ್ರ ಸರ್ಕಾರ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಟೀಕೆ ಮಾಡುತ್ತಾರೆ, ಒಳಗೊಂದು ಹೊರಗೊಂದು ಹೇಳಿಕೆಯನ್ನು ಕಾಂಗ್ರೆಸ್ ಸರ್ಕಾರದವರು ನೀಡುತ್ತಿದ್ದಾರೆ, ಈ ಸಂದರ್ಭದಲ್ಲಿ ನಾವು ಯಾವುದೇ ರಾಜಕೀಯವನ್ನು ಮಾಡುತ್ತಿಲ್ಲ INDIA ಒಕ್ಕೂಟದ ತಮಿಳುನಾಡಿನ ಪಕ್ಷದವರ ವಿಶ್ವಾಸ ಗಳಿಸುವುದು ಮುಖ್ಯವಾಗಿದೆ, ರಾಜ್ಯದ ರೈತರ ಹಿತ ಕಾಪಾಡುವುದು ಒಳ್ಳೆಯದು, ಆ ದಿಕ್ಕಿನಲ್ಲಿ ಗಟ್ಟಿಯಾಗಿ ನಿಂತು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ನಮ್ಮಲ್ಲಿ ಈಗ ಕಡಿಮೆ ನೀರಿದೆ, ತಮಿಳುನಾಡಿನಲ್ಲಿ ಹಿಂಗಾರು ಮಳೆ ಆಗಬಹುದು. ನ್ಯಾಯಾಧೀಕರಣದ ಮುಂದೆ ಹೋಗಿ ಪರಿಣಾಮಕಾರಿ ಕೆಲಸ ಮಾಡಬೇಕು. ಕೋರ್ಟ್ 3 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದಾಗ ಪುಣ್ಯಾತ್ಮರೇ ಸ್ವಾಗತ ಮಾಡಿದ್ದರು. ಅಲ್ಲಿಂದಲೇ ಈ ತಪ್ಪಿನ ಕೌಂಟ್ ಡೌನ್ ಶುರುವಾಯಿತು ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.