ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.5ಕ್ಕೆ ನಡೆಯಬೇಕಿದ್ದ ಬೃಹತ್ ಸಮಾವೇಶವನ್ನು ಏಪ್ರಿಲ್ 9 ರಂದು ನಡೆಸಲು ನಿರ್ಧರಿಸಲಾಗಿದೆ. ಕೋಲಾರದಲ್ಲಿ ನಡೆಯುವ ಈ ಸತ್ಯಮೇವ ಜಯತೇ ಕಾರ್ಯಕ್ರಮದ ಪ್ರಯುಕ್ತ ಸಭೆ ನಡೆಸಲಾಯಿತು.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಇದ್ದರು.
ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದು ನಿರ್ಭಯ ಎಂದು ಪ್ರಶ್ನಿಸಿರುವ ಅವರು, ಬೆಂಗಳೂರು ಬಿಜೆಪಿ ಆಡಳಿತದಡಿ ಅಸುರಕ್ಷಿತ ನಗರವಾಗಿದೆ ಎಂದು ಆರೋಪಿಸಿದ್ದಾರೆ.
“ಇದು ಪರಾಮರ್ಶಿಸುವ ಸಮಯವಾಗಿದೆ. ನೀವು ನಿಮ್ಮ ಮನೆಯಿಂದ ಸುರಕ್ಷಿತವಾಗಿ ಹೊರ ಹೋಗಲು ಸಾಧ್ಯವಿಲ್ಲವಾದರೆ, ಪಾರ್ಕ್ಗೆ ಸುರಕ್ಷಿತವಾಗಿ ಹೋಗಲು ಸಾಧ್ಯವಾಗಿಲ್ಲವಾದ್ರೆ, ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ಆಗದಿದ್ದರೆ, ಲೈಂಗಿಕ ದಾಳಿ ಮತ್ತು ಗ್ಯಾಂಗ್ ರೇಪ್ ನಿಮ್ಮನ್ನು ಭಯಭೀತರಾಗಿಸಿದ್ದರೆ, ನೀವು ಬಿಜೆಪಿಯನ್ನು ಶಪಿಸುವುದಿಲ್ಲವೇ?” ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.