Monday, December 11, 2023
spot_img
- Advertisement -spot_img

ಪಂಚಮಸಾಲಿ ಮೀಸಲಾತಿ ಕಾಂಗ್ರೆಸ್‌ನವ್ರ ಕೈಯಲ್ಲಿದೆ, ನಾನು ಹೋರಾಟದಲ್ಲಿ ಭಾಗಿಯಾಗಲ್ಲ: ಯತ್ನಾಳ್

ವಿಜಯಪುರ : ರಾಜ್ಯದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗಲೇ ನಾವು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದೇವೆ. ಅದನ್ನು ಅನುಷ್ಠಾನ ಮಾಡುವುದು ಕಾಂಗ್ರೆಸ್‌ ಸರ್ಕಾರದ ಕೈಯಲ್ಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು.

ನಮ್ಮ ಸರ್ಕಾರ ಇದ್ದಾಗ ಮೀಸಲಾತಿ ಸಂಬಂಧ ನೋಟಿಫಿಕೇಷನ್ ಮಾಡಿದ್ದೀವಿ, ರಾಜ್ಯಪಾಲರ ಸುಗ್ರೀವಾಜ್ಞೆಯೂ ಆಗಿದೆ. ಅನುಷ್ಠಾನ ತರುವುದು ಕಾಂಗ್ರೆಸ್‌ಗೆ ಬಿಟ್ಟಿದ್ದು. ನಮ್ಮ ಕೈಯಲ್ಲಿ ಏನೂ ಇಲ್ಲ ಎಂದರು.

ಮುಂದೆ ಏನಾದ್ರೂ ಆಗಬೇಕಾದ್ರೆ ಗುರುಗಳ ಶಿಷ್ಯಂದಿರು ಇದ್ದಾರೆ, ಅವರೇ ನೋಡಿಕೊಳ್ತಾರೆ. ಕಾಶಪ್ಪನವರ್, ವಿನಯ ಕುಲಕರ್ಣಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದಾರೆ, ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ, ಅವರೇ ಇದನ್ನು ನೋಡಿಕೊಳ್ತಾರೆ ಎಂದರು.

ಇದನ್ನೂ ಓದಿ : ‘ಅನ್ನಭಾಗ್ಯ ಯೋಜನೆ’ ಸಂಪೂರ್ಣ ಅನುಷ್ಠಾನಕ್ಕೆ ಒತ್ತಾಯಿಸಿ ವಿತರಕರಿಂದ ಪ್ರತಿಭಟನೆ

ನಾವು ಪಂಚಮಸಾಲಿ ಸಮುದಾಯ ಇಟ್ಟ ಬೇಡಿಕೆಯ ಪರವಾಗಿ ಹೋರಾಟ ಮಾಡಿಬಿಟ್ಟಿದ್ದೇವೆ, ಹಗಲೆಲ್ಲಾ ಭಾಗವಹಿಸಲು ನಮಗೆ ಸಾಧ್ಯವಿಲ್ಲ, ಬೇರೆ ಕೆಲಸಗಳು ಇವೆ. ನಮ್ಮ ಸರ್ಕಾರ ಇದ್ದಾಗ ನೋಟಿಫಿಕೇಷನ್ ಮಾಡಿದ್ದೀವಿ, ಪಂಚಮಸಾಲಿ ಸಮುದಾಯದ ಸಾಕಷ್ಟು ಜನ ಶಾಸಕರು, ಮಂತ್ರಿಗಳು ಆಗಿದ್ದಾರೆ. ಈಗ ಅವರೆಲ್ಲ ಸೇರಿ ಹೋರಾಟ ಮಾಡಿ, ನ್ಯಾಯ ಕೊಡಿಸ್ತಾರೆ ಎಂದರು.

ಇದನ್ನೂ ಓದಿ : ತಮಿಳುನಾಡಿಗೆ ʼಕಾವೇರಿʼ ನೀರು ಬಿಡಬಾರದು: ಕಟೀಲ್‌

ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಹೋರಾಟದ ತೀವ್ರತೆ ಇದ್ದಷ್ಟು ಈಗಿಲ್ಲ ಎಂದು ಮಾತನಾಡಿ,
ಆಗ ನಮ್ಮದೇ ಸರ್ಕಾರವಿತ್ತು. ನಾವೆಲ್ಲ ಗಟ್ಟಿ ಇದ್ದೆವು, ಈಗ ಕಾಶಪ್ಪನವರು ಅವರೆಲ್ಲ ಇದ್ದಾರಲ್ಲಾ?, ಮಾಡಿ ತೋರಿಸಲಿ. ನಾವು ಮೀಸಲಾತಿ ನೀಡಿದ್ದೀವಿ. ಈಗ ಅದನ್ನು ಜಾರಿ ಮಾಡಲಿ. ನಾವು ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ, ಎಲ್ಲಾ ಸಮಾಜಗಳಿಗೂ ನಾವು ನ್ಯಾಯ ಒದಗಿಸಿದ್ದೇವೆ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles