Monday, March 27, 2023
spot_img
- Advertisement -spot_img

ಬಿಜೆಪಿಯಲ್ಲಿ ನಾಯಕರ ನಡುವೆಯೇ ಅಸಮಾಧಾನ ಹೆಚ್ಚಾಗಿದೆ : ಟ್ವೀಟ್ ಮಾಡಿ ಬಿಜೆಪಿಯ ಕಾಲೆಳೆದ ಕಾಂಗ್ರೆಸ್

ಬೆಂಗಳೂರು: ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಹಾಗೂ ನಾಯಕರ ನಡುವೆಯೇ ಅಸಮಾಧಾನ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಟ್ವೀಟ್ ಮಾಡಿ ಬಿಜೆಪಿಯ ಕಾಲೆಳೆದಿರುವ ಕಾಂಗ್ರೆಸ್, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಡೆಗಣನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಯುವಜನರ ಭವಿಷ್ಯವನ್ನು ಸಮಾಧಿ ಮಾಡಿದ ರಾಜ್ಯ ಬಿಜೆಪಿ ಸರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ. ಯುವಜನರ ಉದ್ಯೋಗ ಮಾರಾಟ, ಶಿಷ್ಯವೇತನ ನೀಡದೇ ಯುವಜನರ ಶಿಕ್ಷಣಕ್ಕೆ ದ್ರೋಹ, ಕೆಪಿಎಸ್ಸಿ ಕೆಇಎ ಹಾಗೂ ಕೆಎಸ್ಪಿ ಅಭ್ಯರ್ಥಿಗಳಿಗೆ ವಂಚನೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ ಎಂದಿದೆ.

ನರೇಂದ್ರ ಮೋದಿಯವರೇ, ಯುವಜನೋತ್ಸವ ಎಂದರೆ ಸಿನೆಮಾ ತಾರೆಯರನ್ನು ಕರೆಸಿ ಹಾಡು, ಡ್ಯಾನ್ಸ್ಗಳ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಯುವಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯುವಜನರ ಈ ಸಾವು ಹಾಗೂ ನೋವಿನ ಬಗ್ಗೆ ತಾವು ಮೌನ ಮುರಿಯುವಿರಾ? ಎಂದು ಮೋದಿ ಮೌನ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿದೆ.

Related Articles

- Advertisement -

Latest Articles