ಬಳ್ಳಾರಿ: ರಾಜ್ಯದ ಜನತೆ ಈ ಬಾರಿ ಚುನಾವಣೆಯಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಇಡೀ ರಾಜ್ಯವನ್ನು ಈ ಬಿಜೆಪಿಯವರು ಮಾರಾಟ ಮಾಡಲಿದ್ದಾರೆ ಎಂದು ರಣದೀಪಸಿಂಗ್ ಸುರ್ಜೇವಾಲಾ ಟೀಕಿಸಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಮೈಸೂರು ಸ್ಯಾಂಡಲ್ ಸೋಪಿನ ಘಮ ಇತ್ತು. ಇದೀಗ ಅಧ್ಯಕ್ಷ ಅದರ ಸುಗಂಧವನ್ನೂ ಮಾರಿಬಿಟ್ಟಿದ್ದಾರೆ.ಕೋಟಿ ಕೋಟಿ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಜೂನ್ ಒಂದರೊಳಗೆ ರಾಜ್ಯದಲ್ಲಿ ಕೈ ಸರ್ಕಾರವಿರುತ್ತದೆ. ಬಿಜೆಪಿಯಂತೆ ನಾವು ಸುಳ್ಳು ಹೇಳುವುದಿಲ್ಲ. ಹೇಳಿದಂತೆ ಕೆಲಸ ಮಾಡುತ್ತೇವೆ. ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯುತ್ತೇವೆ ಎಂದು ತಿಳಿಸಿದರು. ನುಡಿದಂತೆ ನಡೆಯುವ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನರಿಗೆ ದ್ರೋಹ ಎಸಗಿದ ಬಿಜೆಪಿಯನ್ನು ಸೋಲಿಸಿ ಎಂದರು.
ಸಿದ್ದರಾಮಯ್ಯರನ್ನು ಕೊಂದುಬಿಡಿ ಎಂದು ಸಚಿವ ಅಶ್ವತ್‌ಥನಾರಾಯಣ ಹೇಳುತ್ತಾರೆ. ಹಾಗಾದರೆ ಇದೇನಾ ಬಿಜೆಪಿ ಸಂಸ್ಕೃತಿ- ಸಂಸ್ಕಾರ ಎಂದು ಪ್ರಶ್ನಿಸಿದರು.