ಬೆಂಗಳೂರು: ಬಿಜೆಪಿಯಲ್ಲಿ ರವಿಗಳದ್ದೇ ಕಾರುಬಾರು. ಬ್ರೋಕರ್ಸ್ ಮೋರ್ಚಾದಲ್ಲಿ ಸ್ಯಾಂಟ್ರೋ ರವಿ, ರೌಡಿ ಮೋರ್ಚಾದಲ್ಲಿ ಫೈಟರ್ ರವಿ, ಕುಡುಕರ ಮೋರ್ಚಾದಲ್ಲಿ ಓಟಿ ರವಿ. ಈ ಮೂರೂ ರವಿಗಳಿಂದಲೇ ಬಿಜೆಪಿಗೆ ಬೆಳಗಾಗುತ್ತದೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸರ್ವ ಸಾಕ್ಷಿಗಳನ್ನೂ ನಾಶಪಡಿಸಿದ ನಂತರ ಸರ್ಕಾರದ ಚೀಫ್ ಬ್ರೋಕರ್, ಬಿಜೆಪಿ ಮುಖಂಡ ಸ್ಯಾಂಟ್ರೋ ರವಿಯ ಬಂಧನದ ನಾಟಕ ನಡೆಯುತ್ತಿದೆ. ಸ್ಯಾಂಟ್ರೋ ರವಿಯನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ. ಆತ ಗುಜರಾತಿಗೆ ಹೋಗಿದ್ದೇಕೆ? ಎಲ್ಲಾ ಬಗೆಯ ದಂಧೆಕೋರರಿಗೂ ಗುಜರಾತ್ ಪ್ರಿಯವಾಗುವುದೇಕೆ? ಇದು ಗುಜರಾತ್ ಮಾಡೆಲ… ಪ್ರಭಾವವೇ?’ ಎಂದು ಪ್ರಶ್ನಿಸಿದೆ.
ಇನ್ನೂ ಉಚಿತ ವಿದ್ಯುತ್ ಕೊಡುವ ಬಗ್ಗೆ ಕಾಂಗ್ರೆಸ್ ಘೋಷಿಸಿದ 200 ಯೂನಿಟ್ ಉಚಿತ ವಿದ್ಯುತ್‌ನ ‘ಗೃಹಜ್ಯೋತಿ’ ಯೋಜನೆಯು ಅಸಾಧ್ಯದ ಭರವಸೆ ಎಂದು ಬಿಜೆಪಿ ಅಪಪ್ರಚಾರ ಮಾಡಲು ಶುರು ಮಾಡಿದೆ.
ಕಾಂಗ್ರೆಸ್ ಈಗಾಗಲೇ ಅಸಾಧ್ಯ ಎಂದ ಹಲವು ಜನಪರ ಯೋಜನೆ ನೀಡಿ ಯಶಸ್ವಿಯಾಗಿರುವುದು ಕಣ್ಣ ಮುಂದಿದೆ. ಜನಪರ ಕೆಲಸಗಳು ಬಿಜೆಪಿಗೆ ಅಸಾಧ್ಯವಿರಬಹುದು, ಕಾಂಗ್ರೆಸ್ಸಿಗಲ್ಲ’ ಎಂದು ಕೆಪಿಸಿಸಿ ತಿರುಗೇಟು ನೀಡಿದೆ. ಜನರಿಗೆ ನೀಡುವ ಭರವಸೆ ಈಡೇರಿಸುವುದು ಬಿಜೆಪಿಗೆ ಅಸಾಧ್ಯದ ಮಾತು. ಆದರೆ 200 ಯುನಿಟ್ ಉಚಿತ ವಿದ್ಯುತ್ ಕಾಂಗ್ರೆಸ್ ನೀಡಲಿದೆ’ ಎಂದು ಹೇಳಿದೆ.