ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಹಸ್ತದ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೇವಲ ಶಾಸಕರು, ಸಚಿವರ ಮೇಲೆ ಕಣ್ಣಿಡದ ಕಾಂಗ್ರೆಸ್, ಪಾಲಿಕೆ ಹಂತದಲ್ಲೂ ಆಪರೇಷನ್‌ಗೆ ಮುಂದಾಗಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಧಾನಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ತೊಡಗಿದೆ.
ನಗರದ ಹಲವು ವಾರ್ಡ್ ನಾಯಕರ ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ಪಾಲಿಕೆಯಲ್ಲೂ ಘರ್‌ವಾಪ್ಸಿ ಶುರುಮಾಡಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು, ಬಳಿಕ ಬಿಜೆಪಿ-ಜೆಡಿಎಸ್ ಸೇರಿರುವ ನಾಯಕರನ್ನು ಮರಳಿ ಕಾಂಗ್ರೆಸ್‌ಗೆ ಕರೆತರಲು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಮಲಿಂಗಾರೆಡ್ಡಿ ತೆರೆಮರೆಯ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಟಿಟಿಡಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದ ಆರ್ ವಿ ದೇಶಪಾಂಡೆ
ಸುಮಾರು 30ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್‌ಗಳು ಈಗಾಗಲೇ ಪಕ್ಷ ಸೇರ್ಪಡೆಯಾಗಿದ್ದು, ಇನ್ನೂ 20 ಮಂದಿ ಮಾಜಿ ಕಾರ್ಪೋರೇಟರ್‌ಗಳಿಗೆ ಗಾಳ ಹಾಕಲಾಗಿದೆ ಎಂದು ತಿಳಿದುಬಂದಿದೆ. ಯಶವಂತಪುರ, ಹೆಬ್ಬಾಳ ಭಾಗದಲ್ಲಿ ಈಗಾಗಲೇ ಪಕ್ಷ ಸೇರ್ಪಡೆ ಆರಂಭಗೊಡಿದೆ. ಮುಂದಿನ 1 ತಿಂಗಳ ಅವಧಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್‌ಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮುಂದಿನ ತಿಂಗಳಿಂದ ‘ಆಶಾಕಿರಣ ಯೋಜನೆ’ ಜಾರಿ: ಸಚಿವ ದಿನೇಶ್ ಗುಂಡೂರಾವ್
ಈ ಬಾರಿ 125 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಘರ್‌ವಾಪ್ಸಿ ನಡೆಸಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ರಾಮಲಿಂಗಾರಡ್ಡಿ ತೆರೆಮರೆಯಲ್ಲಿ ಕಾರ್ಯ ಆರಂಭಿಸಿದ್ದೆರೆ, ಇತ್ತ ಡಿ.ಕೆ ಶಿವಕುಮಾರ್ ಕ್ಷೇತ್ರ ಪರ್ಯಾಟನೆ ಹೆಸರಲ್ಲಿ ಮಾಜಿ ಕಾರ್ಪೋರೇಟರ್‌ಗಳಿಗೆ ಗಾಳ ಹಾಕಿದ್ದಾರೆ ಎನ್ನಲಾಗ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.