Wednesday, May 31, 2023
spot_img
- Advertisement -spot_img

ಸಿಎಂ ಬೊಮ್ಮಾಯಿಯವರಿಗೆ ನಟ ಸುದೀಪ್ ಬೆಂಬಲ: ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ಸಿಎಂ ಬೊಮ್ಮಾಯಿಯವರಿಗೆ ನಟ ಸುದೀಪ್ ಬೆಂಬಲ ಘೋಷಿಸಿದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ​ವ್ಯಂಗ್ಯವಾಡಿದೆ.

“ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ವೋಟು ಗಿಟ್ಟುವುದಿಲ್ಲ. ಸಿಎಂ ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ ಹೋಗಿದೆ!. ಬಿಎಸ್​ ಯಡಿಯೂರಪ್ಪ ಮುಖವನ್ನು ಮರೆಮಾಚಲು ಬಿಜೆಪಿ ಮುಂದಾಗಿದೆ. ಬಿಜೆಪಿಗೆ ಈಗ ವರ್ಚಸ್ಸು ನಾಯಕರಿಲ್ಲದಿರುವುದು ದುರಂತ” ಎಂದು ಟ್ವೀಟ್​ ಮಾಡಿದೆ.

ನಟ ಕಿಚ್ಚ ಸುದೀಪ್ ನನಗೆ ರಾಜಕೀಯದಲ್ಲಿ ಹಲವು ಜನ ಫ್ರೆಂಡ್ಸ್ ಇದ್ದಾರೆ, ಆದ್ರೆ ನನ್ನ ಬದುಕಿನಲ್ಲಿ ಕಷ್ಟವಿದ್ದಾಗ ಸಿಎಂ ಬೊಮ್ಮಾಯಿಯವರು ನೆರವಾಗಿದ್ದರು, ಹೀಗಾಗಿ ನಾನು ಬೊಮ್ಮಾಯಿಯವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.

Related Articles

- Advertisement -

Latest Articles