ಬಾಗಲಕೋಟೆ : ಹಾಲಿ ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬದಲಾವಣೆಗಾಗಿ ಯೋಚಿಸುತ್ತಿರೋದು ಗೊತ್ತೇ ಇದೆ, ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಿದರೆ ಅವರ ಸಂಚಾರದ ಅನುಕೂಲಕ್ಕಾಗಿ ಕ್ಷೇತ್ರದ ಕಾರ್ಯಕರ್ತರು ಸೇರಿಕೊಂಡು ಹೆಲಿಕಾಪ್ಟರ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡಿ, ಮತ್ತೊಮ್ಮೆ ಸಿಎಂ ಆಗಲಿ ಎಂದು ನಾನು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಹರಕೆ ಕಟ್ಟಿಕೊಂಡಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗುತ್ತದೆ ಎಂದು ಯೂತ್ ಕಾಂಗ್ರೆಸ್ನ ಬಾದಾಮಿಯ ಉಪಾಧ್ಯಕ್ಷ ಹನಮಂತಗೌಡ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಮತ್ತೆ ಸ್ಪರ್ಧೆ ಮಾಡಬೇಕು ಇಲ್ಲವಾದಲ್ಲಿ, ಅವರ ಮನೆಯ ಎದುರು ಧರಣಿ ಮಾಡುವುದಾಗಿ ಎಂದು ಸಿದ್ದರಾಮಯ್ಯನವರು ಆಪ್ತರು ಈ ಹಿಂದೆ ಒತ್ತಾಯಿಸಿದ್ದರು. ಕ್ಷೇತ್ರದ ಶಾಸಕರಾಗಿ ಸುಮಾರು 3 ಸಾವಿರ ಕೋಟಿಯಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಐತಿಹಾಸಿಕ ತಾಣವಾಗಿರುವ ಬಾದಾಮಿ ಅಭಿವೃದ್ಧಿ ಆಗಿದೆ. ಮತ್ತೆ ಸ್ಪರ್ಧೆ ಮಾಡಿದರೆ, ಮುಂದೆ ಮುಖ್ಯಮಂತ್ರಿ ಆಗಲಿರುವ ಸಿದ್ದರಾಮಯ್ಯನವರಿಂದ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎಂದಿದ್ದರು.
ಇದೀಗ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಿದರೆ ಹೆಲಿಕಾಪ್ಟರ್ ಕೊಡುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.