ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಕೋಲಾರದಿಂದಲೇ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಸೋಮವಾರ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಯಾವುದೇ ಕ್ಷೇತ್ರ ಇಲ್ಲ, ಇನ್ನು ಕೂಡಾ ಕ್ಷೇತ್ರಕ್ಕಾಗಿ ಹುಡುಕಾಟ ಮಾಡುತ್ತಿರುವುದಾಗಿ ಹೇಳಿ ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ನನಗೆ ವರುಣಾ ಕ್ಷೇತ್ರದಲ್ಲಿ ಬೇಡಿಕೆ ಇದ್ದರೂ ಕೋಲಾರದಲ್ಲಿ ಶಾಸಕ ಶ್ರೀನಿವಾಸ್ ಗೌಡ ಕ್ಷೇತ್ರ ಬಿಟ್ಟುಕೊಡಲು ತಯಾರಿದ್ದಾರೆ. ಹೀಗಾಗಿ ನಾನು ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಆದ್ರೆ ಅದರ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಏನು ಎಂಬುದನ್ನ ಖಚಿತ ಪಡಿಸಿಕೊಂಡು ಸ್ಪರ್ಧೆ ಮಾಡ್ತೀನಿ ಎಂದರು. ಇನ್ನು ಕಳೆದ ಬಾರಿ ಜಯಗಳಿಸಿದ್ದ ಬಾದಾಮಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯ ಜಯಗಳಿಸಿರುವ ವರುಣ ಮತ್ತು ಕೋಲಾರ ಪೈಕಿ ಯಾವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಇತ್ತು. ಈಗ ಸಿದ್ದರಾಮಯ್ಯ ವರುಣಾವನ್ನು ಪುತ್ರನಿಗೆ ತ್ಯಾಗ ಮಾಡಿ ಮೊದಲ ಬಾರಿಗೆ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.