Wednesday, March 22, 2023
spot_img
- Advertisement -spot_img

ಪ್ರೊ.ಭಗವಾನ್ ವಿರುದ್ಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಂಡ್ಯ: ಹಿರಿಯ ಸಾಹಿತಿ ಪ್ರೊ.ಭಗವಾನ್ ವಿರುದ್ಧ ಜಿಲ್ಲೆಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾಲಗೆ ಹರಿಬಿಟ್ಟಿದ್ದ ಭಗವಾನ್, ಶ್ರೀರಾಮಚಂದ್ರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಶ್ರೀರಾಮಚಂದ್ರ ಮದ್ಯಸೇವನೆ ಮಾಡ್ತಿದ್ದ, ಸೀತೆಯನ್ನ ಕಾಡಿಗೆ ಅಟ್ಟಿದ್ದ. ಶ್ರೀರಾಮನನ್ನ ಶಂಭೂಕನನ್ನ ಕೊಲೆಗೈದ ಹಂತಕ ಎಂದು ಬಿಂಬಿಸಿದ್ದಾರೆನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ತಕ್ಷಣವೇ ಎಫ್​ಐಆರ್ ದಾಖಲಿಸಿಕೊಂಡು ಭಗವಾನ್​ರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಭಗವಾನ್ ಹಿಂದೂ ಧರ್ಮವನ್ನು, ಹಿಂದೂ ಧರ್ಮ ದೇವತೆಗಳನ್ನು, ಪುರಾಣಗಳನ್ನು, ಭಗವದ್ಗೀತೆ , ಪೂಜಾಸ್ಥಳಗಳನ್ನು ಕಟುವಾಗಿ ಟೀಕಿಸಿ ಅನೇಕ ಬಾರಿ ವಿವಾದಕ್ಕೆ ಗುರಿಯಾಗಿದ್ದಾರೆ. ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ” ಎಂದು ಪ್ರೊ.ಭಗವಾನ್ ಅವರು ಹೇಳಿಕೆ ನೀಡಿ ಹಿಂದೂಗಳ ಕೋಪಕ್ಕೆ ಗುರಿಯಾಗಿದ್ದರು.

Related Articles

- Advertisement -

Latest Articles