ಬೆಂಗಳೂರು: ಸಿಎಂ ಕಚೇರಿಯಿಂದ ಪಂಚಾಯತ್ ವರೆಗೆ ಭ್ರಷ್ಟಾಚಾರದ ವಾಸನೆ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಸರ್ಕಾರ 100 ದಿನ ಪೂರೈಸಿದೆ ಆದ್ರೆ ನೂರಾರು ತಪ್ಪು ಮಾಡಿದೆ. ಗ್ಯಾರಂಟಿ ಯೋಜನೆಗೆ ಮಾನದಂಡ ಹಾಕುವ ಮೂಲಕ ಮಾತು ತಪ್ಪಿದೆ ಎಂದಿದ್ದಾರೆ.
‘ನಮ್ಮ ಆಡಳಿತಾವಧಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಿತ್ತು. ಉಚಿತ ವಿದ್ಯುತ್ ಅಂದ್ರು ಆದರೆ ಈಗ ಕಂಡಿಷನ್ ಹಾಕಿದೆ. ರೈತರಿಗೆ ವಿದ್ಯುತ್ ಕೊಡದೆ ಮೋಸ ಮಾಡಿದೆ. ರೈತರ ಪರವಾದ ಘೋಷಣೆ ಯಾವುದೂ ಇಲ್ಲ, ಎಲ್ಲಾ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ. ಸರ್ವಾಧಿಕಾರಿಯ ರೀತಿ ಧೋರಣೆ ಮಾಡುತ್ತಿದೆ. ಜೈನ ಮುನಿ ಹತ್ಯೆ ಆಗಿದೆ, ಕಾನೂನು ಸುವ್ಯವಸ್ಥೆ ಹಾಳಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಕೆಟ್ ಹಿಡಿಯೋರನ್ನು ಬೆಳೆಸ್ತಾರೆ ; ಸ್ವಪಕ್ಷೀಯರ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ
‘ಚುನಾವಣೆ ಮೊದಲು ಘೋಷಿಸಿದ್ದ ಯೋಜನೆಗಳ ಬಗ್ಗೆ ಈಗ ಮಾತನಾಡುತ್ತಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ 15 ಸಾವಿರ ಸಂಬಳ ಎಂದಿದ್ದರು, ಅದರ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಹೀಗಾಗಿ ಕೈ ಕೊಟ್ಟ ಯೋಜನೆಗಳು, ಹಳಿ ತಪ್ಪಿದ ಆಡಳಿತ ಅನ್ನೋ ಪುಸ್ತಕ ಬಿಡುಗಡೆ ಮಾಡಬೇಕು ಎಂದಿದ್ದೇವೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ತುಂಬಿದೆ’ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.