Friday, September 29, 2023
spot_img
- Advertisement -spot_img

ಸಿಪಿಎಂ ನಾಯಕಿ ಸರೋಜಿನಿ ಬಾಲನಂದನ್ ನಿಧನ

ಕೊಚ್ಚಿ: ಕೇರಳದ ಸಿಪಿಎಂ ನಾಯಕಿ ಮತ್ತು ರಾಜ್ಯ ಸಮಿತಿ  ಮಾಜಿ ಸದಸ್ಯೆ ಸರೋಜಿನಿ ಬಾಲನಂದನ್ ಅವರು ಕೊಚ್ಚಿಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮಗಳು ಸುಲೇಖಾ ಅವರ ಮನೆಯಲ್ಲಿದ್ದ ಸರೋಜಿನಿ ಅವರು ನಿನ್ನೆ ತಡರಾತ್ರಿ ಕೊನೆಯುಸಿರೆಳೆದರು. ಸರೋಜಿನಿ ಅವರು ಮಾಜಿ ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯ ದಿವಂಗತ ಇ ಬಾಲನಂದನ್ ಅವರ ಪತ್ನಿ.

ಸದ್ಯ ಅವರು ಪಾರ್ಥಿವ ಶರೀರವನ್ನು ಸಿಪಿಎಂ ಕಲಮಶ್ಶೇರಿ ಪ್ರದೇಶ ಸಮಿತಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಕಲಮಶ್ಶೇರಿ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೇರಳದ ಗುರುವಾಯೂರಿಗೆ ಬಿಎಸ್‌ವೈ ಭೇಟಿ

ಸರೋಜಿನಿ ಅವರು 1985ರಿಂದ 2012ರವರೆಗೆ ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾಗಿದ್ದರು. 1996ರಲ್ಲಿ ಅಲುವಾದಿಂದ ಕೇರಳ ವಿಧಾನಸಭೆಗೆ ಸ್ಪರ್ಧಿಸಿದ್ದರು. ಅವರು ಜನಾಧಿಪತ್ಯ ಮಹಿಳಾ ಸಂಘದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

1980–85ರ ಅವಧಿಯಲ್ಲಿ ಕಲಮಶ್ಶೇರಿ ಪಂಚಾಯಿತಿ ಅಧ್ಯಕ್ಷೆಯೂ ಆಗಿದ್ದರು. ಇನ್ನು ಸರೋಜಿನಿ ಅವರ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles