ರಾಮನಗರ : ಮಾಜಿ ಸಿಎಂ ಹೆಚ್ ಡಿ ಕೆ ಚೆನ್ನಪಟ್ಟಣಕ್ಕೆ ಬರಬಾರದಿತ್ತು, ಅದಕ್ಕೆ ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಸಂಪೂರ್ಣವಾಗಿ ಸೋತು ಹೋಗಿದ್ದಾರೆ, ಜೊತೆಗೆ ತಮ್ಮ ಮಗನನ್ನು ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಎಲೆಕ್ಷನ್ ಬರುತ್ತಲೇ ಇರುತ್ತವೆ, ನಾನು 5 ಬಾರಿ ಶಾಸಕನಾಗಿದ್ದೇನೆ,4 ಬಾರಿ ಸೋತಿದ್ದೇನೆ, ಜನ ಕಾಂಗ್ರೆಸ್ ಗೆ ಹೋಗಬೇಕಿತ್ತು, ಪಕ್ಷೇತ್ರವಾಗಿ ಸ್ಪರ್ಧಿಸಬೇಕಿತ್ತು ಎಂದು ಮಾತನಾಡುತ್ತಿದ್ದಾರೆ, ಇದೇನು ಕೊನೆಯ ಎಲೆಕ್ಷನ್ ಅಲ್ಲ, ನಾನು ಸೋತಿದ್ದರೂ ಜನರ ಮುಂದೆ ಬಂದಿದ್ದೇನೆ ಎಂದರು.ಮಾಜಿ ಸಿಎಂ ಕುಮಾರಸ್ವಾಮಿ ಎಲೆಕ್ಷನ್ ಮುಗಿದ ತಕ್ಷಣ ಕಿಂಗ್ ಮೇಕರ್ ಆಗ್ತೇನೆ ಎಂದು ವಿದೇಶಕ್ಕೆ ಹಾರಿದ್ರು , ಆದರೆ ಕರೆಯಲು ಯಾರೂ ಹೋಗದ ಕಾರಣ ಅವರೇ ವಾಪಸ್ ಬರಬೇಕಾಯಿತು ಎಂದು ಲೇವಡಿ ಮಾಡಿದರು.
ಒಕ್ಕಲಿಗ ಸಮುದಾಯದ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ಹಿಂದಿನಿಂದಲೂ ಜೆಡಿಎಸ್ ಭದ್ರಕೋಟೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಎದುರು ಸಿ.ಪಿ ಯೋಗೇಶ್ವರ್ ಸೋಲುಂಡಿದ್ದರು.