ಬೆಂಗಳೂರು: ಟಿಪ್ಪು ಜಯಂತಿ ಆಚರಿಸಿದ ಮತಾಂಧ ರಾಜಕಾರಣಿ ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಶುದ್ದ ಅಂತಾ ಹೇಳಿಕೊಳ್ಳಲು ಕೂಡಾ ಶುದ್ಧತೆಯಿಂದ ಇರಬೇಕು. ಯಾರು ಮತಾಂಧ ಅಂತಾ ಬಿಡಿಸಿ ಹೇಳಬೇಕಾ ಸಿದ್ದರಾಮಯ್ಯನವರೇ?ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿ, ನಿಮ್ಮಂತಹವರ ಕೈಗೆ ಅಧಿಕಾರ ಕೊಟ್ಟರೆ ಕರ್ನಾಟಕ ಉಳಿಯುತ್ತಾ ? ಬೆರಕೆ ರಾಜಕಾರಣ ಮಾಡುವವರು ಶುದ್ಧ ಹಿಂದೂ ಆಗಲು ಸಾಧ್ಯವಿಲ್ಲ ಎಂದು ಕುಂಕುಮ, ಕೇಸರಿ ಕಂಡರೆ ಭಯ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಮೊನ್ನೆ ಕುಂಕುಮ ಹಾಕಿದ್ದರಲ್ಲಿ ಹಣೆಯೇ ಕಾಣ್ತಿರಲಿಲ್ಲ. ರಾಜ್ಯದಲ್ಲಿ ಕೇಸರಿ ಗಾಳಿ ಬೀಸುತ್ತಿದೆ. ಕೇಸರಿ ವಿರುದ್ಧ ರಾಜಕಾರಣ ಮಾಡುವವರಿಗೆ ಸೋಲು ನಿಶ್ಚಿತ ಎಂದರು.
ಬಿಜೆಪಿ ಮಾಡಿದ್ದು ರಾಷ್ಟ್ರವಾದ, ಹಿಂದುತ್ವದ, ವಿಕಾಸವಾದದ ರಾಜಕಾರಣ. ಸಿದ್ದರಾಮಯ್ಯನವರೇ ನೀವು ಶುದ್ಧ ಹಿಂದೂ ಆಗಲಿ ಅಂತಾ ನಿಮ್ಮ ತಂದೆ ಸಿದ್ದರಾಮಯ್ಯ ಅಂತಾ ಹೆಸರಿಟ್ಟರು. ಆದರೆ ಸಿದ್ದರಾಮಯ್ಯನವರೇ ನೀವ್ಯಾಕೆ ಹಿಂಗದ್ರೀ? ರಾಜ್ಯದ ಜನ ನಿಮ್ಮನ್ನು ಸಿದ್ದಾಮುಲ್ಲಾ ಖಾನ್ ಅಂತಾ ಕರೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನೂ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ ಸಿಟಿ ರವಿ ಕುಕ್ಕರ್ ಬಾಂಬ್ ಆರೋಪಿ ಮೇಲೆ ಡಿಕೆಶಿಗೆ ಅನುಕಂಪ ಹುಟ್ಟಿದ್ದು, ಆತ ಬಿರಿಯಾನಿ ಮಾಡಲು ಕುಕ್ಕರ್ ತೆಗೆದುಕೊಂಡು ಹೋಗುತ್ತಿದ್ದ ಅಂತಾ ಭಾವಿಸಿದ್ದೀರಾ ನೀವು ಎಂದು ವ್ಯಂಗ್ಯವಾಡಿದರು.