ಬೆಂಗಳೂರು : ಜೋಶಿ ಅವರ ಜಾತಿಯ ಬಗ್ಗೆ ಹೆಚ್‌ಡಿಕೆಗೆ ಮಾಹಿತಿ ಕೊರತೆಯಿದೆ. ಪ್ರಲ್ಹಾದ್ ಜೋಶಿಯವರ 4-5 ತಲೆಮಾರು ಕರ್ನಾಟಕದಲ್ಲಿದೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಯೋಗ್ಯತೆ ಇರುವುದಕ್ಕೆ ಜೋಶಿ ಹೆಸರು ಸಿಎಂ ಆಕಾಂಕ್ಷಿ ಪಟ್ಟಿಯಲ್ಲಿದೆ. ಕುಮಾರಸ್ವಾಮಿ ಮಾತಿನ ಮೂಲಕ ಬ್ರಾಹ್ಮಣ ದ್ವೇಷ ತೋರಿಸುತ್ತಿದ್ದಾರೆ. ಅವರು ನಮ್ಮ ಸಂಸದೀಯ ಮಂಡಳಿ ಸದಸ್ಯರಲ್ಲ ಎಂದು ಕಿಡಿ ಕಾರಿದರು.
ಬಿಜೆಪಿ ಗೆದ್ದರೆ ಬ್ರಾಹ್ಮಣ ಸಿಎಂ ಹಾಗೂ 8 ಮಂದಿ ಡಿಸಿಎಂ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದು, ಕೇಸರಿ ಪಡೆ ಗರಂ ಆಗಿದೆ. ಪ್ರಲ್ಹಾದ್ ಜೋಶಿಯನ್ನು ಸಿಎಂ ಮಾಡಲು RSS ನಿರ್ಧರಿಸಿದೆ, ಜೋಶಿ ಮರಾಠ ಬ್ರಾಹ್ಮಣ ಸಮುದಾಯದವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇವರು ಮರಾಠ ಬ್ರಾಹ್ಮಣರು. ಉಪಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದನ್ನು ಆದಷ್ಟು ಬೇಗ ತೆಗೆದಿಡ್ತೀನಿ. ಹೀಗಾಗಿ ಜೆಡಿಎಸ್ ವಿರುದ್ದ ಪಂಚರತ್ನ ರಥಯಾತ್ರೆ ಬಗ್ಗೆ ಪ್ರಹ್ಲಾದ್ ಜೋಷಿ ಟೀಕೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕೆ ಹೇಳಿದ್ದರು.
ಪ್ರಹ್ಲಾದ್ ಜೋಷಿಯವರು ದಕ್ಷಿಣ ಕರ್ನಾಟಕದ ಬ್ರಾಹ್ಮಣರ ಸಂಸ್ಕೃತಿಯವರಲ್ಲ, ನಮ್ಮ ಕಡೆ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಎನ್ನುತ್ತಾರೆ, ಹಳೆ ಕರ್ನಾಟಕ ಭಾಗದ ಬ್ರಾಹ್ಮಣರ ಕಾಲಿಗೆ ಬೀಳುತ್ತೇವೆ ನಾವು. ಆದ್ರೆ ಇವ್ರು ಹಾಗೆ ಹೇಳೋದಿಲ್ಲ. ಮಹಾರಾಷ್ಟ್ರ ಭಾಗದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು ಇವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ, ದೇಶ ಒಡೆಯೋದು, ಕುತಂತ್ರ ರಾಜಕೀಯ ಮಾಡುವುದು, ದೇಶಕ್ಕೆ ಕೊಡುಗೆ ಕೊಟ್ಟವರನ್ನು ಮಾರಣಹೋಮ ಮಾಡುವಂತದ್ದು ಅವರ ಸಂಸ್ಕೃತಿ ಎಂದಿದ್ದರು.