ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಜತೆಗೆ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಮುನೀಶ್ ಮೌದ್ಗಿಲ್ ಅವರನ್ನೂ ಡಿಪಿಆರ್ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.ಆದರೆ, ರೂಪಾ, ರೋಹಿಣಿಗೆ ಯಾವ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ಇನ್ನೂ ತಿಳಿದು ಬಂದಿಲ್ಲ,
ಈ ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಕಳೆದ ಕೆಲವು ದಿನಗಳಿಂದ ಸರಕಾರಕ್ಕೆ ತುಂಬಾ ತಲೆನೋವಾಗಿತ್ತು. ಇಬ್ಬರು ಈರೀತಿ ಬೀದಿಯಲ್ಲಿ ಜಗಳ ಮಾಡೋದು ಸರಿಯಲ್ಲ ಎಂದು ಸರ್ಕಾರ ಹೇಳಿತ್ತು. ಇವರ ಜಗಳಕ್ಕೆ ಕೊನೆ ಇಲ್ಲ ಎಂದು ತಿಳಿದ ಸರ್ಕಾರ ಸಂಪುಟದಲ್ಲಿ ಚರ್ಚಿಸಿತ್ತು. ಸಚಿವ ಆರಗ ಜ್ಞಾನೇಂದ್ರ,ಸಚಿವ ಮಾಧುಸ್ವಾಮಿ ಕೂಡಾ ಸಿಎಂ ಜೊತೆಗೆ ಚರ್ಚಿಸಿ ಸೂಕ್ತ ಕ್ರಮವಹಿಸ್ತೇವೆ ಎಂದಿದ್ದರು.
ಸಿಎಂ ಬೊಮ್ಮಾಯಿ ಇಬ್ಬರು ಮಹಿಳಾ ಅಧಿಕಾರಿಗಳು ಕಾನೂನು ಪಾಲಿಸಲು ಸೂಚಿಸಿದ್ದೇವೆ. ರೂಲ್ಸ್ ಫಾಲೋ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದರು.ಅಷ್ಟೇ ಅಲ್ಲದೇ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ರಾಜ್ಯ ಸರ್ಕಾರ ಸೂಚನೆಯೂ ನೀಡಿತ್ತು. ಇದೀಗ ಡಿ ರೂಪಾ, ರೋಹಿಣಿ ಸಿಂಧೂರಿ ಆರೋಪ ಪ್ರತ್ಯಾರೋಪಗಳನ್ನು ಕಂಡು ಇಬ್ಬರನ್ನೂ ವರ್ಗಾವಣೆ ಮಾಡಿದೆ. ಅಂದಹಾಗೆ ವರ್ಗಾವಣೆ ಆದೇಶ ಬರೋ ಮೋದಲೇ ಸಿಂಧೂರಿ ಕಚೇರಿಗೆ ಹಾಜರಾಗಿಲ್ಲ ಅನ್ನೋದು ವರದಿಯಾಗಿತ್ತು.