ಮಂಡ್ಯ : ದಲಿತರ ತೋಟಿ ಇನಾಂ ಭೂಮಿಯನ್ನು ಕಬಳಿಸಲು ಸಚಿವ ಡಿ ಸುಧಾಕರ್ ಯತ್ನಿಸಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಮಂಡ್ಯದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಸಂಜಯ ವೃತ್ತದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘರ್ಷ ಸಮಿತಿ, ಸಚಿವ ಡಿ. ಸುಧಾಕರ್ ಹಾಗೂ ಡಿಕೆಶಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸುಧಾಕರ್ ಬಂಧನಕ್ಕೆ ಆಗ್ರಹಿಸಿದ ಅವರು, ದಲಿತರ ತೋಟಿ ಇನಾಂ ಭೂಮಿಯನ್ನು ಕಬಳಿಸಲು ಸಚಿವ ಡಿ ಸುಧಾಕರ್ ಯತ್ನಿಸಿದ್ದಾರೆ. ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸಿ ದಲಿತರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ‘ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಸಿಬಿಐ/ಎಸ್ಐಟಿಗೆ ವಹಿಸುವಂತೆ ಕೋರ್ಟ್ ಹೇಳಿದೆ’ : ಮಣಿ ಸರ್ಕಾರ್
ರಾಜ್ಯಪಾಲರು ಸಚಿವ ಡಿ ಸುಧಾಕರ್ ಅವರನ್ನು ಸಚಿವಸ್ಥಾನದಿಂದ ವಜಾ ಮಾಡಬೇಕು. ಜಾತಿ ನಿಂದನೆ ಕೇಸ್ ದಾಖಲಿಸಿ,ಉನ್ನತ ಮಟ್ಟದ ತನಿಖೆ ನಡೆಸಿ ಸುಧಾಕರ್ ಬಂದಿಸಬೇಕೆಂದ ದಲಿತ ಸಂಘರ್ಷ ಸಮಿತಿ, ದಲಿತ ನಿಂದನೆ ಮಾಡಿದ್ದಾರೆ ಎಂದು ಕೇಸ್ ದಾಖಲಾದರು ಡಿಕೆ ಶಿವಕುಮಾರ್, ಸುಧಾಕರ್ ಅವರನ್ನು ಸಮರ್ಥಿಸಿಕೊಳ್ಳುವುದು ಮಾತ್ರವಲ್ಲದೆ, ಅವರ ರಕ್ಷಣೆಗೆ ಮುಂದಾಗಿದ್ದಾರೆ, ಆದ್ದರಿಂದ ಅವರನ್ನು ಸಹ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ : ‘ಕುಮಾರಸ್ವಾಮಿ ನಾನು ಆತ್ಮೀಯ ಸ್ನೇಹಿತರು’
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.