ಮಂಡ್ಯ : KRSನಲ್ಲಿ ನಡೆಯುತ್ತಿದ್ದ ರೈತಸಂಘದ ಅಹೋರಾತ್ರಿ ಧರಣಿ ಇಂದು ಸ್ಥಗಿತವಾಗಿದೆ. ಕಾವೇರಿ ವಿಚಾರದಲ್ಲಿ ಸುಪ್ರೀಂ ವಿಚಾರಣೆ ಮುಂದೂಡಿಕೆ ಹಿನ್ನೆಲೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಇಂದು ಕೈಬಿಟ್ಟಿದ್ದಾರೆ.
ಸೆ.11 ಕ್ಕೆ ಮೈ-ಬೆಂ ಹೆದ್ದಾರಿಯನ್ನು ಸಾವಿರಾರು ಸಂಖ್ಯೆಯಲ್ಲಿ ಹೆದ್ದಾರಿಯನ್ನು ಅನ್ನದಾತರು ಬಂದ್ ಮಾಡಲು ಮುಂದಾಗಿದ್ದಾರೆ. ಮಂಡ್ಯದ ಕೆ.ಆರ್.ಎಸ್ ಅಣೆಕಟ್ಟೆ ಬಳಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಧರಣಿ ರೈತರು ಕೈ ಬಿಟ್ಟಿದ್ಧಾರೆ.
ಇಂದು ತುರ್ತು ಸಭೆ ನಡೆಸಿ ರೈತಸಂಘ ಕೆಲ ನಿರ್ಣಯ ಕೈಗೊಂಡಿದ್ದು, ನಾಳೆ ರೈತಸಂಘದ ನಿಯೋಗ ಸಿಎಂರನ್ನು ಭೇಟಿ ಮಾಡಲಿದೆ. ಅನ್ನದಾತರು ಜಿಲ್ಲೆಯ ರೈತರ ಬದುಕಿನ ವಾಸ್ತವ ಸ್ಥಿತಿ ತಿಳಿಸಲಿದ್ದು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ರೈತರು ನಿಲ್ಲಿಸುವಂತೆ ಒತ್ತಾಯಿಸಲಿದ್ದಾರೆ.
ಅಷ್ಟೇ ಅಲ್ಲದೇ ಕೆ.ಆರ್.ಎಸ್ ಬದಲು ಶ್ರೀರಂಗಪಟ್ಟಣದಲ್ಲಿ ಸೆ.8 ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಸೆ.11 ರಂದು ರಾಜ್ಯ ಹೆದ್ದಾರಿ ಸೇರಿ ಮೈ-ಬೆಂ ದಶಪಥ ಹೆದ್ದಾರಿ ತಡೆಗೆ ನಿರ್ಣಯಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.