ಬೆಂಗಳೂರು : ದೀಪಾವಳಿಗೆ ಮನೆಗೆ ದೀಪಾಲಂಕಾರ ಮಾಡಲು ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಬಳಸಿದ ಆರೋಪ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕೇಳಿ ಬಂದಿದೆ. ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಕುಮಾರಸ್ವಾಮಿ ಅಚಾತುರ್ಯ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕುಮಾರಸ್ವಾಮಿಯವರ ಮನೆಯ ಮುಂದೆ ಇರೋರು ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಮಾಧ್ಯಮದವರು ತೋರಿಸಿದ್ದನ್ನು ನಮ್ಮ ಸೋಷಿಯಲ್ ಮೀಡಿಯಾ ಪಿಕಪ್ ಮಾಡಿದೆ. ನಮ್ಮ ಸೋಷಿಯಲ್ ಮೀಡಿಯಾ ಅದರ ಡ್ಯೂಟಿ ಮಾಡಿದೆ. ಬೆಸ್ಕಾಂನವರು ಏನು ಕಾನೂನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತಾರೆ. ನಾವು ಇದಕ್ಕೆ ಇಂಟರ್ ಫಿಯರ್ ಅಗುವ ಅವಶ್ಯಕತೆ ಇಲ್ಲ ಎಂದರು.
ಇದನ್ನೂ ಓದಿ : ವಿದ್ಯುತ್ ಕಳ್ಳತನದ ಕಾಂಗ್ರೆಸ್ ಆರೋಪಕ್ಕೆ ಕುಮಾರಸ್ವಾಮಿ ಸ್ಪಷ್ಟನೆ
ಹೆಚ್‌ಡಿಕೆ ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಈ ಸವಾಲು, ಪಂಚರತ್ನಕ್ಕೆಲ್ಲ ಜನರು ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಅವರ ಸವಾಲುಗಳು, ಅವರ ಪ್ರವಾಸಗಳು, ಏನೇನು ಮಾತನಾಡಿದ್ದಾರೆ ಎಲ್ಲಾ ಇಟ್ಕೊಂಡು ಬರಲಿ. ನಾಲ್ಕನೇ ತಾರೀಖು ಅಸೆಂಬ್ಲಿ ಇದೆ. ಅಲ್ಲಿ ಅವರ ಬಿಚ್ಚು ಮನಸ್ಸಿನ ನುಡಿ ಮುತ್ತುಗಳನ್ನೆಲ್ಲ ಕೇಳೋಣ ಎಂದು ಹೇಳಿದರು.
ಬೆಂಗಳೂರಿನ ಜೆಪಿ ನಗರದ ಮನೆಗೆ ದೀಪಾವಳಿ ಪ್ರಯುಕ್ತ ದೀಪಾಲಂಕಾರ ಮಾಡಲು ವಿದ್ಯುತ್ ಕಂಬಂದಿನ ನೇರವಾಗಿ ವಿದ್ಯುತ್ ಪಡೆಯುವ ಮೂಲಕ ವಿದ್ಯುತ್ ಕಳ್ಳತನ ಮಾಡಿದ ಆರೋಪ ಮಾಜಿ ಸಿಎಂ ಹೆಚ್‌ಡಿಕೆ ಮೇಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್‌ಡಿಕೆ, ಅಚಾತುರ್ಯ ನಡೆದಿದೆ, ಈ ವಿಚಾರದಲ್ಲಿ ನನ್ನ ವಿಷಾದವಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.