ಬೆಂಗಳೂರು : ಖಾಸಗಿ ವಾಹನದವರು ಬಂದ್ ಮಾಡುವ ಅವಶ್ಯಕತೆ ಇಲ್ಲ. ಖಾಸಗಿ ಬಸ್ಸಿನವರಿಗೆ ಸ್ವಲ್ಪ ತೊಂದರೆಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಊಬರ್, ಆಟೋ ಚಾಲಕರು ಪ್ರತಿಭಟನೆ ಬಹುಶಃ ಅದು ರಾಜಕೀಯ ಪ್ರೇರಣೆಯಿಂದ ನಡೆಯತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ಖಾಸಗಿ ಒಕ್ಕೂಟದ ಬಂದ್ ಬಗ್ಗೆ ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಮಾಡಿದರೂ ನಾವು ಖಾಸಗಿ ಆಟೋ, ಊಬರ್ ನವರ ಬಗ್ಗೆ ಬಹಳ ಸಿಂಪಥಿಯಿಂದ ಇದ್ದೇವೆ. ಸಾರಿಗೆ ಒಕ್ಕೂಟದವರು ಹೆದರಿಸುವುದು, ಪ್ರಯಾಣಿಕರಿಗೆ ತೊಂದರೆ ಮಾಡುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸುತ್ತದೆ. ಯಾವ ರೀತಿ ಅವರಿಗೆ ಸಹಕಾರ ಮಾಡಬಹುದೋ ನೋಡುತ್ತದೆ ಎಂದು ತಿಳಿಸಿದ್ದಾರೆ. ಅವರೆಲ್ಲರೂ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಖಾಸಗಿ ಬಸ್ಸಿನವರಿಗೆ ತೊಂದರೆಯಾಗಿದ್ದು ನಿಜವಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ನೈತಿಕತೆ ಇಲ್ಲದವ್ರು, ನೈತಿಕ ಬೆಂಬಲ ನೀಡ್ತಿದ್ದಾರೆ : ರಾಮಲಿಂಗಾ ರೆಡ್ಡಿ
ಆಟೋ ಚಾಲಕನ ಮೇಲೆ ಹಲ್ಲೆ..
ಖಾಸಗಿ ಸಾರಿಗೆ ಒಕ್ಕೂಟದ ಬಂದ್ ಹಿನ್ನೆಲೆ ರಸ್ತೆಗಿಳಿದ ಆಟೋಗಳ ಮೇಲೆ ಕಲ್ಲು ತೂರಾಟ ನಡೆಸಿ, ಚಾಲಕರ ಮೇಲೆ ಹಲ್ಲೆ ಮಾಡಿರುವ ಘಟನೆ ಟೌನ್ ಹಾಲ್ ಬಳಿ ನಡೆದಿದೆ.
ಒತ್ತಾಯಪೂರ್ವಕವಾಗಿ ಬಂದ್ ಮಾಡುತ್ತಿದ್ದ ಹೋರಾಟಗಾರರು ಓಡಾಡುತ್ತಿದ್ದ ಆಟೋವನ್ನು ತಡೆದು ಪೊಲೀಸರ ಸಮ್ಮುಖದಲ್ಲೆ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.
ಅಲ್ಲದೆ ಆಟೋಕೆ ಕಲ್ಲು ಎಸೆದಿರುವ ಪುಂಡರು ಗಾಜನ್ನು ಪುಡಿ, ಪುಡಿ ಮಾಡಿದ್ದಾರೆ. ಹಲ್ಲೆಕೋರರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.