ನವದೆಹಲಿ: ಡೀಪ್‌ಫೇಕ್ ವಿಡಿಯೋಗಳು ಭಾರತದ ಮಟ್ಟಿಗೆ ದೊಡ್ಡ ಆತಂಕಕಾರಿ ಬೆಳವಣಿಗೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ ಡೀಪ್‌ಫೇಕ್ ವಿಡಿಯೋ ಸೃಷ್ಟಿಗೆ AI (ಕೃತಕ ಬುದ್ಧಿಮತ್ತೆ)ಯ ದುರುಪಯೋಗ ದೊಡ್ಡ ಕಳವಳಕಾರಿ ಅಂಶ ಎಂದಿದ್ದಾರೆ.
ಡೀಪ್‌ಫೇಕ್‌ಗಳನ್ನು ರಚಿಸಲು ಮತ್ತು ಅಂತಹ ವೀಡಿಯೊಗಳು ಇಂಟರ್‍ನೆಟ್‌ನಲ್ಲಿ ಹರಿಬಿಟ್ಟಾಗ ಎಚ್ಚರಿಕೆ ನೀಡುವಂತೆ ಚಾಟ್‌ಜಿಪಿಟಿ (ChatGpt) ತಂಡವನ್ನು ಕೇಳಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾಲದಲ್ಲಿ ತಂತ್ರಜ್ಞಾನವನ್ನು ಜವಬ್ದಾರಿಯುತವಾಗಿ ಬಳಸಿಕೊಳ್ಳುವುದು ಬಹಳ ಮುಖ್ಯ ಎಂದರು.
ಇದನ್ನೂ ಓದಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಭೇಟಿಯಾದ ಕೇಂದ್ರ ಸಚಿವ ಪಿಯೂಶ್ ಗೋಯಲ್
ದೆಹಲಿಯ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಯ ‘ದೀಪಾವಳಿ ಮಿಲನ’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.
ಈ ಕೃತ್ಯದ ಸಂತ್ರಸ್ತರು ಪೊಲೀಸರಿಗೆ ದೂರುಗಳನ್ನು ಸಲ್ಲಿಸಲು ಮತ್ತು “ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಒದಗಿಸಲಾದ ಪರಿಹಾರಗಳನ್ನು ಪಡೆದುಕೊಳ್ಳಲು” ಕೇಂದ್ರವು ಸಲಹೆ ನೀಡಿದೆ.
ಇದನ್ನೂ ಓದಿ: ಮಧ್ಯ ಪ್ರದೇಶ ಚುನಾವಣೆ: ಮತಗಟ್ಟೆಯಲ್ಲಿ ಸೆಲ್ಫಿಗಾಗಿ AI ಕ್ಯಾಮೆರಾ, ಆನ್‌ಲೈನ್’ನಲ್ಲಿ ಟೋಕನ್ ವ್ಯವಸ್ಥೆ!
ಕಳೆದ ವಾರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ತಪ್ಪು ಮಾಹಿತಿ ಹರಡುವುದನ್ನು ತಡೆಯುವುದು “ಕಾನೂನು ಬಾಧ್ಯತೆ” ಎಂದು ಹೇಳಿದ್ದರು. “ಅಂತಹ ವರದಿ ಮಾಡಿದ 36 ಗಂಟೆಗಳ ಒಳಗೆ ವರದಿ ಮಾಡಿದಾಗ ಅಂತಹ ಯಾವುದೇ ವಿಷಯವನ್ನು ತೆಗೆದುಹಾಕಿ ಮತ್ತು ಐಟಿ ನಿಯಮಗಳು 2021 ರ ಅಡಿಯಲ್ಲಿ ನಿಗದಿಪಡಿಸಿದ ಸಮಯದ ಚೌಕಟ್ಟಿನೊಳಗೆ ತ್ವರಿತ ಕ್ರಮವನ್ನು ಖಚಿತಪಡಿಸಿಕೊಳ್ಳಿ ಮತ್ತು ವಿಷಯ ಅಥವಾ ಮಾಹಿತಿಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಿ” ಎಂದು ಸಾಮಾಜಿಕ ಜಾಲತಾಣಗಳಿಗೆ ಸೂಚನೆ ನೀಡಿದ್ದರು.
ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ಕಾಜೊಲ್ ಅಗರ್‍ವಾಲ್ ಅವರ ಡೀಪ್‌ಫೇಕ್ ವಿಡಿಯೋಗಳು ಹರಿದಾಡಿದ್ದವು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತಲ್ಲದೇ, ಭವಿಷ್ಯದ ಆತಂಕ ತಂದೊಡ್ಡಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.