ಮುಂಬೈ : ದೇಶಾದ್ಯಂತ ಪಠಾಣ್ ಸಿನಿಮಾ ಹಾಡಿಗೆ ಬೈಕಾಟ್ ಅಭಿಯಾನ ಆರಂಭಿಸಿದ್ದು, ಶ್ರೀರಾಮಸೇನೆ ಸಹ ಬೈಕಾಟ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಪಠಾಣ್ ಸಿನಿಮಾದಲ್ಲಿ ಬೇಷರಂ ರಂಗ್’ ಶಾರುಖ್‌ಖಾನ್ ಹಾಗೂ ದೀಪಿಕಾ ಪಡುಕೋಣೆ ಹಾಟ್ ನೃತ್ಯದಿಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಿಡಿಮಿಡಿಗೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಇತ್ತೀಚೆಗೆ ರಿಲೀಸ್ ಆಗಿರುವ ಪಠಾಣ್ ಸಿನೆಮಾದ `ಬೇಷರಂ ರಂಗ್’ ಹಾಡಿನ ನೃತ್ಯ ಅಶ್ಲೀಲ ಹಾಗೂ ಅಸಭ್ಯವಾಗಿದೆ, ಇದು ನಾಚಿಗೇಡಾಗುವಂತಹದ್ದು ಎಂದು ಕಿಡಿ ಕಾರಿದ್ದಾರೆ. ಇನ್ನೂ ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಮುತಾಲಿಕ್ ಗರಂ ಆಗಿದ್ದಾರೆ.
ಸ್ವಾಮಿ ನಾವು ಸಹನೆ ಮಾಡಿಕೊಳ್ಳುತಿದ್ದೇವೆ. ನಮ್ಮನ್ನೆ ಟಾರ್ಗೆಟ್ ಮಾಡಿದ್ದೀರಿ. ಮುಸ್ಲಿಮರು ಬುರ್ಕಾ ಹಾಕಿಕೊಂಡು ಕುಣಿಯಲಿ, ಕ್ರಿಶ್ಚಿಯನ್ನರು ಚರ್ಚ್ನಲ್ಲಿ ಡಾನ್ಸ್ ಮಾಡಲಿ ನೋಡೋಣ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.