ನವದೆಹಲಿ: ರಾಷ್ಟ್ರ ರಾಜಧಾನಿಯ ಐದು ಮೆಟ್ರೋ ನಿಲ್ದಾಣಗಳ ಹೊರ ಗೋಡೆಗಳ ಮೇಲೆ ಭಾನುವಾರ ಸಿಖ್ ಉಗ್ರರು ‘ಖಲಿಸ್ತಾನ್’ ಪರ ಘೋಷಣೆ ಬರೆದಿದ್ದಾರೆ. ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಯುಎಸ್ ಮೂಲದ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ‘SFJ’ ಹೆಸರನ್ನು ಉಲ್ಲೇಖಿಸುವ ‘ಖಲಿಸ್ತಾನ್ ಪರ’ ಘೋಷಣೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
“ಮೋದಿ ಭಾರತವು ಸಿಖ್ಖರ ನರಮೇಧವನ್ನು ಮಾಡಿದೆ”, “ದೆಹಲಿ ಬನೇಗಾ ಖಲಿಸ್ತಾನ್ (ದೆಹಲಿ ಖಲಿಸ್ತಾನ್ ಆಗಲಿದೆ)” ಮತ್ತು “ಖಲಿಸ್ತಾನ ಜನಾಭಿಪ್ರಾಯ ಸಂಗ್ರಹಣೆ ಜಿಂದಾಬಾದ್ (ಖಲಿಸ್ತಾನ್ ಜನಾಭಿಪ್ರಾಯ ಚಿರಕಾಲ ಬದುಕಲಿ” ಎಂದು ನಗರದ ಮೆಟ್ರೋ ನಿಲ್ದಾಣಗಳ ಹೊರ ಗೋಡೆಗಳ ಮೇಲೆ ಬರೆದಿರುವ ಘೋಷಣೆಗಳಾಗಿವೆ.
ಇದನ್ನೂ ಓದಿ : ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಠಿಸಿದ ನೀರಜ್ : ಶುಭ ಕೋರಿದ ಕೇಂದ್ರ ಕ್ರೀಡಾ ಮಂತ್ರಿ
ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಆದ್ರೆ ಯಾರನ್ನು ಬಂಧಿಸಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸಿಪಿ (ಮೆಟ್ರೋ ದೆಹಲಿ ಪೊಲೀಸ್) ರಾಮ್ ಗೋಪಾಲ್ ನಾಯ್ಕ್ ಮಾತನಾಡಿ, ಐಪಿಸಿ ಸೆಕ್ಷನ್ 153 ಎ (ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505 (ರಾಜ್ಯದ ವಿರುದ್ಧ ಅಪರಾಧವನ್ನು ಪ್ರಚೋದಿಸುವ ಉದ್ದೇಶದಿಂದ ಏನನ್ನಾದರೂ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಮತ್ತು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ದೆಹಲಿ ಪ್ರಿವೆನ್ಶನ್ ಆಫ್ ಡಿಫೇಸ್ಮೆಂಟ್ ಆಫ್ ಪ್ರಾಪರ್ಟಿ ಆಕ್ಟ್, 2007, ಈ ನಿಟ್ಟಿನಲ್ಲಿ ಕೇಸ್ ದಾಖಲಿಸಲಾಗಿದೆ.
ಗೋಡೆ ಬರಹಗಳನ್ನು ಪೊಲೀಸರು ಹಳಿಸಿ ಹಾಕಿದ್ದಾರೆ. ಈ ಬೆಳವಣಿಗೆಗಳು ದೆಹಲಿಯಲ್ಲಿ ಸೆಪ್ಟೆಂಬರ್ 8-10 ರವರೆಗೆ ನಡೆಯಲಿರುವ ಜಿ 20 ಶೃಂಗಸಭೆಗೆ ಕೆಲವು ದಿನಗಳ ಮುಂಚಿತವಾಗಿ ನಡೆದಿರುವುದು ಆಘಾತಕಾರಿಯಾಗಿದೆ. ಪ್ರಸ್ತುತ ಜಿ20 ನ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಇತರ ಗಣ್ಯರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ : ಚಂದ್ರಯಾನ-3 : ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಹೆಸರಿಟ್ಟಿದ್ದು ಮೋದಿಯವರ ಹಕ್ಕು
ಈ ವರ್ಷದ ಮೇನಲ್ಲಿ ಪ್ರಧಾನಿ ಮೋದಿಯವರು ಸಿಡ್ನಿಗೆ ಭೇಟಿ ನೀಡುವ ಮೊದಲು, ಅಲ್ಲಿನ ಹಿಂದೂ ದೇವಾಲಯವನ್ನು “ಭಾರತ ವಿರೋಧಿ” ಘೋಷಣೆಗಳೊಂದಿಗೆ ಧ್ವಂಸಗೊಳಿಸಲಾಯಿತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.