ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಗೆ ನಮಸ್ಕರಿಸಿ ಶುಭ ಹಾರೈಸಿದ್ದಾರೆ. ಶ್ರೀಗಳ ಚಿಕಿತ್ಸೆಯ ಎಲ್ಲಾ ಮಾಹಿತಿಗಳನ್ನು ತರಿಸಿಕೊಳ್ಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಆಶ್ರಮಕ್ಕೆ ಭೇಟಿ ನೀಡಿ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಅಂತರ್ಗತ ಶಕ್ತಿಯಿಂದಾಗಿ ಆರೋಗ್ಯವಾಗಿ ಬರುತ್ತಾರೆ. ದೀರ್ಘ ಕಾಲದವರೆಗೆ ನಮ್ಮ ಜೊತೆ ಇರುತ್ತಾರೆ. ಜ್ಞಾನ ಯೋಗಾಶ್ರಮದಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು.
ವೈದ್ಯರ ಚಿಕಿತ್ಸೆಗೆ ಸಿದ್ದೇಶ್ವರ ಶ್ರೀಗಳು ಸ್ಪಂದಿಸುತ್ತಿದ್ದು, ಶ್ರೀಗಳ ಚೇತರಿಕೆಗೆ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದರು.
ಇನ್ನೂ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ ಪ್ರಹ್ಲಾದ್ ಜೋಶಿ ಶ್ರೀಗಳ ಆರೋಗ್ಯದ ಮಾಹಿತಿ ನೀಡಿದರು. ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೇವರ ಅನಾರೋಗ್ಯದ ವಿಷಯ ತಿಳಿಯುತ್ತಲೇ ಆಶ್ರಮದತ್ತ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಪಡೆಯಲು ಉರಿ ಬಿಸಿನಲ್ಲಿಯೇ ಕುಳಿತಿದ್ದಾರೆ.
ಮಠ ಆಡಳಿತಾಧಿಕಾರಿಗಳು ವೆಬ್ಸೈಟ್ನಲ್ಲಿ ಶ್ರೀಗಳನ್ನು ಕಾಣಬಹುದು ಎಂದು ಹೇಳಿದ್ರೂ ಭಕ್ತರು ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಇಂದು ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಆಗಮಿಸಿದ್ದರು. ಸುತ್ತೂರು ಶ್ರೀಗಳ ಜೊತೆ ವಿವಿಧ ಮಠಾಧೀಶರು ಸಹ ಆಗಮಿಸಿದ್ದರು.