ಬೆಂಗಳೂರು: ಐಟಿ, ಇಡಿ, ಸಿಬಿಐ ಎಲ್ಲ ಬಿಜೆಪಿಯ ಪ್ರೈವೇಟ್ ವಿಭಾಗಗಳಾಗಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಒಬ್ಬೊಬ್ಬ ಅಭ್ಯರ್ಥಿಗೆ 10 ಕೋಟಿ ಹಣ ಬಿಜೆಪಿ ಕೊಡ್ತಾ ಇದೆ, ಇದು ನಮಗಿರುವ ಮಾಹಿತಿ. ಸರ್ಕಾರವೇ ಹಣ ಸಾಗಿಸ್ತಿದೆ, ಐಟಿ ಅಧಿಕಾರಿಗಳು ರಕ್ಷಣೆ ಮಾಡ್ತಾ ಇದ್ದಾರೆ, ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಬಹುದು. ಐಟಿ ಅಧಿಕಾರಿಗಳೇ ಹಣ ತಲುಪಿಸಬಹುದು ಎಂದರು.
ಕಾಂಗ್ರೆಸ್ ಟಿಕೆಟ್ ಕಗ್ಗಂಟಿನ ವಿಚಾರ ಮಾತನಾಡಿ, ಕಗ್ಗಂಟು ಏನೂ ಇಲ್ಲ, ನಿನ್ನೆ 50% ರಷ್ಟು ಚರ್ಚೆ ಆಗಿದೆ. ಇವತ್ತು 50% ಚರ್ಚೆ ಆಗಲಿದೆ. ಬಹುತೇಕ ಎಲ್ಲಾ ತೀರ್ಮಾನ ಮಾಡ್ತಾರೆ. ಕೆಲವು ಕಡೆ ಗೊಂದಲ ಇದ್ದರೆ 4-5 ಕಡೆ ಉಳಿಯಬಹುದು. ಇದೆಲ್ಲವೂ ರಾಜಕೀಯ ತಾನೇ ಎಂದರು.
ಮೊದಲು ಬಿಜೆಪಿಯ ಹಿತೈಷಿಗಳ ಮೇಲೆ ರೇಡ್ ಮಾಡಲಿ, ಆಮೇಲೆ ಮಾತಾಡಲಿ. ನಮಗೆ ಭಯ ಅಲ್ಲ, ಇದರಿಂದ ತೊಂದರೆ, ಕಿರುಕುಳ, ಕೆಟ್ಟ ಹೆಸರು ಬರುತ್ತದೆ ಎಂದು ಐಟಿ, ಇಡಿ ಅಧಿಕಾರಿಗಳ ಭಯ ಕಾಂಗ್ರೆಸ್‌ಗೆ ಇದೆ ಎಂದು ಸಿಎಂ ಹೇಳಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.