Monday, March 20, 2023
spot_img
- Advertisement -spot_img

ಪ್ರಜಾಧ್ವನಿ ಯಾತ್ರೆಯಲ್ಲಿ ನಾವು ಏನು ನಿರೀಕ್ಷೆ ಮಾಡಿದ್ವೋ ಅದರ ಎರಡು ಪಟ್ಟು ಜನ ಸೇರಿದ್ದಾರೆ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ಬೆಂಗಳೂರು: ಪ್ರಜಾಧ್ವನಿ ಯಾತ್ರೆಯನ್ನು ವಿಧಾನಸಭಾ ಕ್ಷೇತ್ರವಾರು ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಮುಗಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಏನು ನಿರೀಕ್ಷೆ ಮಾಡಿದ್ವೋ ಅದರ ಎರಡರಷ್ಟು ಜನ ಸೇರಿದ್ದಾರೆ. ಇದರ ಅರ್ಥ ಜನರ ಸಮಸ್ಯೆ ಇತ್ತಿಚೀಗೆ ದುಪ್ಪಟ್ಟಾಗಿದೆ. ಹಾಸನ ಮತ್ತು ಮಂಡ್ಯದಲ್ಲಿ ಒಬ್ಬರೇ ಒಬ್ಬರು ನಮ್ಮ ಶಾಸಕರಿಲ್ಲ. ಆದರೂ ಅಲ್ಲಿ ಜನ ಸೇರಿದ್ದು ನೋಡಿ ನನಗೆ ಅಶ್ಚರ್ಯವಾಗಿದೆ. ಶಾಸಕರು ಇಲ್ಲದೆ ಇರುವ ಜಿಲ್ಲೆಯಲ್ಲಿ ಅಷ್ಟು ಜನ ಸೇರಿದ್ದು ದಾಖಲೆ ಎಂದು ಹೇಳಿದ್ದಾರೆ.

ಪ್ರಣಾಳಿಕೆ ವಿಚಾರದಲ್ಲಿ ಪರಮೇಶ್ವರ್ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ. ಅವರು ಬಹಳ ಸುದೀರ್ಘವಾಗಿ ಪಕ್ಷ ಕಟ್ಟಿದವರು. ಬೆಂಗಳೂರಿಗೆ ಒಂದು ವಿಶೇಷವಾದ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ತರಬೇಕಿದೆ. ಬೆಂಗಳೂರು ಟ್ರಾಫಿಕ್ ಮ್ಯಾನ್ಮೆಂಜ್ಮೆಂಟ್​​ಗೆ ಸಂಬಂಧಿಸಿ ಸುರ್ಜೆವಾಲಾ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರು ಪ್ರಜಾಧ್ವನಿ ಹೆಸರಿನಲ್ಲಿ ಬಸ್​ ಯಾತ್ರೆ ಮಾಡುತ್ತಿದ್ದು ಜಿಲ್ಲಾವಾರು ಬಸ್​ ಯಾತ್ರೆ ಪೂರ್ಣಗೊಂಡಿದೆ. ಈಗ ಎರಡು ತಂಡಗಳಾಗಿ ವಿಧಾನಸಭಾಕ್ಷೇತ್ರವಾರು ಬಸ್​ ಯಾತ್ರೆ ಪ್ರಾರಂಭಿಸಿದ್ದಾರೆ.

Related Articles

- Advertisement -

Latest Articles